ಕಿಸ್ ಮಾಡಿ, ತಬ್ಬಿಕೊಂಡು ಕ್ಷಮೆ ಕೋರಿದರು: ನಾಗಚೈತನ್ಯ ಬಗ್ಗೆ ನಟಿ ದಕ್ಷಾ ಹೇಳಿಕೆ ವೈರಲ್
Monday, April 10, 2023
ಹೈದರಾಬಾದ್: ಟಾಲಿವುಡ್ ಸೂಪರ್ ಸ್ಟಾರ್ ನಾಗಚೈತನ್ಯ ಅವರನ್ನು ಯುವ ನಟಿ ದಕ್ಷಾ ನಗರ್ಕರ್ ಕ್ಷಮೆ ಕೋರಿದ್ದರ ಬಗ್ಗೆ ಇತ್ತೀಚೆಗೆ ಮಾಧ್ಯಮ ಸಂದರ್ಶನದಲ್ಲಿ ಆಡಿರುವ ಮಾತೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟಾಲಿವುಡ್‌ನ ಪ್ರಮುಖ ನಟರಲ್ಲಿ ಒಬ್ಬರಾದ ನಾಗಚೈತನ್ಯ 2009ರಲ್ಲಿ ತೆರೆಕಂಡ ಜೋಶ್ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ಸಾಕಷ್ಟು ಹಿಟ್ ಸಿನಿಮಾಗಳ ಮೂಲಕ ಪ್ರಮುಖ ನಟರ ಸಾಲಿಗೆ ಅವರು ಕೂಡ ಸೇರಿಕೊಂಡಿದ್ದಾರೆ. ವೈಯಕ್ತಿಕ ವಿಚಾರದಲ್ಲೂ ಭಾರೀ ಸುದ್ದಿ ನಾಗಚೈತನ್ಯ ವೈಯಕ್ತಿಕ ವಿಚಾರಕ್ಕೂ ಸುದ್ದಿಯಾದವರು.
ಇತ್ತೀಚೆಗೆ ಸಿನಿಮಾ ಸಂದರ್ಶನದಲ್ಲಿ ನಟಿ ದಕ್ಷಾ ನಗರ್ಕರ್ ಅವರು ನಾಗಚೈತನ್ಯ ಕುರಿತು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಡೆಲ್ ಆಗಿರುವ ದಕ್ಷಾ ನಗರ್ಕರ್ ಅತ್ಯಂತ ಜನಪ್ರಿಯ ನಟಿ. ಅವರು 2014ರಲ್ಲಿ ನಟಿಯಾಗಿ ಪಾದಾರ್ಪಣೆ ಮಾಡಿದವರು. ಬಳಿಕ ಅವರು ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿದ್ದ ಅವರು ನಾಗಚೈತನ್ಯ ಅಭಿನಯದ 2022ರಲ್ಲಿ ತೆರೆಕಂಡ ಬಂಗಾರರಾಜು ಚಿತ್ರದಲ್ಲಿ ಹೆಂದ ಚಕ್ಕಕುಂದಿರೋ ಎಂಬ ಹಾಡಿಗೆ ನಾಗಚೈತನ್ಯ ಜತೆ ಸೊಂಟ ಬಳುಕಿಸಿದ್ದರು.
ಇತ್ತೀಚೆಗೆ ಮಾಧ್ಯಮ ಸಂದರ್ಶನದಲ್ಲಿ ನಾನು ನಾಗಚೈತನ್ಯರೊಂದಿಗೆ ನಟಿಸಿದ್ದೇನೆ. ಅವರೊಬ್ಬ ಸರಳ ವ್ಯಕ್ತಿ. ಮಹಿಳೆಯರ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ. ಕಿಸ್ ಮಾಡುವ ಮತ್ತು ತಬ್ಬಿಕೊಳ್ಳುವ ದೃಶ್ಯಗಳಲ್ಲಿ ನಟಿಸುವಾಗ ಅವರು ಕ್ಷಮೆಯನ್ನು ಕೇಳುತ್ತಾರೆ. ಅವರದು ಒಳ್ಳೆಯ ವ್ಯಕ್ತಿತ್ವ ಎಂದು ದಕ್ಷಾ ಗುಣಗಾನ ಮಾಡಿದ್ದಾರೆ.