ಸ್ಟಾರ್ ನಟನೊಂದಿಗೆ ಡೇಟಿಂಗ್: ವದಂತಿಗೆ ನಟಿಯ ಅಭಿಪ್ರಾಯ ಹೀಗಿತ್ತು
Saturday, April 15, 2023
ಮುಂಬೈ: ಕನ್ನಡತಿ ನಟಿ ಪೂಜಾ ಹೆಗ್ಡೆಯವರು ಬಹು ನಿರೀಕ್ಷಿತ ಚಿತ್ರ ಕಿಸೀ ಕಾ ಭಾಯ್ ಕಿಸೀ ಕಾ ಜಾನ್‌ನಲ್ಲಿ ಸಲ್ಮಾನ್ ಖಾನ್ ರೊಂದಿಗೆ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಅದರ ಬೆನ್ನಲ್ಲೇ ಇದೀಗ ಹೊಸ ವದಂತಿಯೊಂದು ಹುಟ್ಟಿಕೊಂಡಿದೆ.
ಇತ್ತೀಚಿನ ದಿನಗಳಲ್ಲಿ ನಟಿ ಪೂಜಾ ಹೆಗ್ಡೆಯವರು ಸಲ್ಮಾನ್ ಖಾನ್ ರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹರಿಬಿಡಲಾಗಿತ್ತು. ಈ ಮೂಲಕ ವದಂತಿಯನ್ನು ಹುಟ್ಟುಹಾಕಲಾಗಿತ್ತು. ಆದರೆ ಇತ್ತೀಚೆಗೆ ಪೂಜಾ ಹೆಗ್ಡೆ ಖಾಸಗಿ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನವೊಂದರಲ್ಲಿ ಆ ವದಂತಿಗಳನ್ನು ತಳ್ಳಿ ಹಾಕಿದ್ದು, ಈ ಕುರಿತು ನಟಿ ಸ್ಪಷ್ಟನೆ ನೀಡಿದ್ದಾರೆ.
'ನಾನು ಯಾರನ್ನು ಡೇಟ್ ಮಾಡುತ್ತಿಲ್ಲ. ಐ ಆ್ಯಮ್ ಸಿಂಗಲ್' ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಸದ್ಯ ನಾನು ನನ್ನ ವೃತ್ತಿ ಜೀವನದ ಮೇಲೆ ಹೆಚ್ಚಿನ ಫೋಕಸ್ ಮಾಡುತ್ತಿದ್ದೇನೆ. ಈ ರೀತಿಯ ವದಂತಿಗಳಿಗೆ ಕಿವಿಗೊಡಲು ಅಥವಾ ಪ್ರತಿಕ್ರಿಯಿಸಲು ನನ್ನ ಬಳಿ ಸಮಯವಿಲ್ಲ ಎಂದು ಹೇಳಿದ್ದಾರೆ.
ಕಿಸೀ ಕಾ ಭಾಯ್ ಕಿಸೀ ಕಾ ಜಾನ್ ಚಿತ್ರದ ಚಿತ್ರೀಕರಣದ ವೇಳೆ ಹೈದರಾಬಾದಿನಲ್ಲಿ ನಡೆದ ನಟಿ ಪೂಜಾ ಹೆಗ್ಡೆಯವರ ಸಹೋದರನ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ನಟ ಸಲ್ಮಾನ್ ಖಾನ್ ಭಾಗಿಯಾಗಿದ್ದರು. ಇದಾದ ಬಳಿಕ ಈ ಇಬ್ಬರು ನಟರು ಖಾಸಗಿ ಕಾರ್ಯಕ್ರಮ ಒಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆ ಬಳಿಕ ಡೇಟಿಂಗ್ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.