-->
ಗೇಮ್ ಆಡುತ್ತಿದ್ದ ವೇಳೆ ಮೊಬೈಲ್ ಸ್ಪೋಟಗೊಂಡು ಬಾಲಕಿ ದಾರುಣ ಸಾವು

ಗೇಮ್ ಆಡುತ್ತಿದ್ದ ವೇಳೆ ಮೊಬೈಲ್ ಸ್ಪೋಟಗೊಂಡು ಬಾಲಕಿ ದಾರುಣ ಸಾವು


ತ್ರಿಶ್ಶೂರ್: ಗೇಮ್‌ ಆಡುತ್ತಿದ್ದ ವೇಳೆ ಮೊಬೈಲ್‌ ಸ್ಫೋಟಗೊಂಡು ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ದುರಂತವೊಂದು ತ್ರಿಶ್ಶೂರ್ ನ ತಿರುವಿಲ್ವಾಮಲ ನಡೆದಿದೆ.

ಎ.24 ರಂದು ರಾತ್ರಿ 10:30ರ ವೇಳೆಗೆ ಬಾಲಕಿ ಆದಿತ್ಯಶ್ರೀ ಮೊಬೈಲ್‌ ನಲ್ಲಿ ಗೇಮ್‌ ಆಡುತ್ತಿದ್ದಳು. ಈ ವೇಳೆ   ಇದ್ದಕ್ಕಿದ್ದಂತೆ ಮೊಬೈಲ್‌ ಸ್ಫೋಟಗೊಂಡಿದೆ. ಪರಿಣಾಮ ಬಾಲಕಿಯು ಮುಖ, ಕೈಗಳು ಹಾಗೂ ದೇಹದ ಮತ್ತಿತರ ಕಡೆಯಲ್ಲಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾಳೆ.

ಮೊಬೈಲ್‌ ನಲ್ಲಿ ಅತೀ ಹೆಚ್ಚು ಅವಧಿ ಗೇಮ್‌ ಆಡಿರುವ ಪರಿಣಾಮ ಮೊಬೈಲ್‌ ಬ್ಯಾಟರಿ ಬಿಸಿಯಾಗಿರಬಹುದು. ಇದರಿಂದ ಮೊಬೈಲ್‌ ಸ್ಫೋಟಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೂರು ವರ್ಷಗಳ ಹಿಂದೆ ಈ ಮೊಬೈಲ್‌ ಫೋನನ್ನು ಖರೀದಿಸಲಾಗಿತ್ತು. ಕಳೆದ ವರ್ಷವಷ್ಟೇ ಮೊಬೈಲ್‌ ಗೆ ಹೊಸ ಬ್ಯಾಟರಿಯನ್ನು ಹಾಕಲಾಗಿತ್ತು. ಘಟನೆ ನಡೆಯುವಾಗ ಆದಿತ್ಯಶ್ರೀ ಅಜ್ಜಿಯೊಂದಿಗಿದ್ದರು. ಅಜ್ಜಿ ಅಡುಗೆ ಕೋಣೆಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಬಾಲಕಿ ಆದಿತ್ಯಶ್ರೀ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮೊಬೈಲ್‌ ಸ್ಫೋಟಕ್ಕೆ ನಿಖರವಾದ ಕಾರಣವೇನೆಂದು ಫಾರೆನಿಕ್ಸ್‌ ವರದಿ ಬಳಿಕವಷ್ಟೇ ತಿಳಿದು ಬರಲಿದೆ ಎಂದು ಪೊಲೀಸರು ಹೇಳಿದ್ದಾರೆ.


Ads on article

Advertise in articles 1

advertising articles 2

Advertise under the article