ಇದು ವಿಚ್ಛೇದನ ಫೋಟೊಶೂಟ್: ವಿವಾಹದ ಬಟ್ಟೆ ಸುಟ್ಟು, ಫೋಟೋ ಹರಿದು ಡೈವೋರ್ಸ್ ಅನ್ನು ಸಂಭ್ರಮಿಸಿದ ಯುವತಿ
Thursday, April 13, 2023
ನವದೆಹಲಿ: ವಿವಾಹಕ್ಕೂ ಮೊದಲು ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡುವುದು, ಮದುವೆಯ ಬಳಿಕ ಪೋಸ್ಟ್ ವೆಡ್ಡಿಂಗ್ ಫೋಟೊಶೂಟ್ ಗರ್ಭಿಣಿಯಾದಾಗ ಬೇಬಿ ಬಂಪ್ ಫೋಟೋಶೂಟ್ ಮಾಡುವುದು ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿದೆ. ಆದರೆ ಇಲ್ಲಿಯವರೆಗೆ ನಾವು ನೀವೆಲ್ಲ ನೋಡಿರುವುದಂಥ ವಿಚಿತ್ರ ಫೋಟೋ ಶೂಟ್ ಒಂದನ್ನು ಯುವತಿಯೋರ್ವಳು ಮಾಡಿಕೊಂಡಿದ್ದಾಳೆ. ವಿಚಿತ್ರವೆನಿಸಿದರೂ ಇದೊಂದು ಟ್ರೆಂಡ್ ಅಂತೆ. ಆದರೆ ಇದು ಸ್ವಲ್ಪ ವಿಚಿತ್ರ ಎನಿಸಿದೇ ಇರದು.
ಹೌದು, ಇದೀಗ ಶುರುವಾಗಿರುವ ಟ್ರೆಂಡ್ ಯಾವುದೆಂದರೆ, ಡಿವೋರ್ಸ್ ಫೋಟೋಶೂಟ್ ಟ್ರೆಂಡ್. ಯುವತಿಯೊಬ್ಬಳು ತನ್ನ ಡಿವೋರ್ಸ್ ಅನ್ನು ಫೋಟೋಶೂಟ್ ಮಾಡಿಸುವ ಮೂಲಕ ಸಂಭ್ರಮಿಸುತ್ತಿದ್ದಾಳೆ. ಇದರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪುಬಿಟಿ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಫೋಟೋಗಳನ್ನು ಪೋಸ್ಟ್ ಮಾಡಲಾಗಿದೆ. ಈಕೆ ವಿಚ್ಛೇದನ ಫೋಟೋಶೂಟ್‌ನಿಂದ ಸೆರೆಹಿಡಿಯಲಾಗಿರುವ ಫೋಟೋ ಗಳಿಗೆ 'ಬೆಲೆಕಟ್ಟಲಾಗದ ಫೋಟೋಗಳು'ಎಂದು ಅಡಿಬರಹ ನೀಡಿದ್ದಾಳೆ. ಈ ಫೋಟೋಗಳು ಸುಮಾರು 5 ಲಕ್ಷಕ್ಕೂ ಅಧಿಕ ಲೈಕ್ ಪಡೆದುಕೊಂಡಿವೆ.
ಫೋಟೋಶೂಟ್ ಚಿತ್ರಗಳಲ್ಲಿ ಲಾರೆನ್ ಬೂಕ್ ಎಂಬ ಯುವತಿ ಬೆರಗುಗೊಳಿಸುವ ಕೆಂಪು ಉಡುಪಿನಲ್ಲಿ ಪೋಸ್ ನೀಡಿದ್ದಾಳೆ. 'ವಿಚ್ಛೇದಿತಳು' ಎಂಬ ಫಲಕವನ್ನು ಹಿಡಿದಿದ್ದಾರೆ. ಬ್ರೂಕ್ ತನ್ನ ವಿವಾಹದ ವೇಲ್ ಅನ್ನು ಬೆಂಕಿಗೆ ಹಾಕುವುದು, ಮದುವೆಯ ಫೋಟೋ ಫೇಮ್ ಅನ್ನು ತುಳಿಯುತ್ತಿರುವುದು, ತನ್ನ ಮಾಜಿ ಗಂಡನ ಚಿತ್ರವನ್ನು ಹರಿದು ಹಾಕುವುದು ಹಾಗೂ ಮದುವೆಯ ಡ್ರೆಸ್ ಮೇಲೆ ನಿಂತು ಶಾಂಪೇನ್ ಬಾಟಲಿಯ ತೆರೆಯುತ್ತಿರುವ ಫೋಟೋಗಳಿವೆ. ಈ ಹೊಸ ಟ್ರೆಂಡ್ ಅನ್ನು ಕೆಲ ನೆಟ್ಟಿಗರು ಇಷ್ಟಪಟ್ಟಿದ್ದು, ಕಾಮೆಂಟ್ ಗಳ ಮಹಾಪೂರವನ್ನೇ ಹರಿಸಿದ್ದಾರೆ. ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಫೋಟೋಗಳನ್ನು ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ.