-->
ಕಟ್ಟಡದ ಮೇಲಿನಿಂದ ಬಿದ್ದ ರಾಡ್ ಶರೀರಕ್ಕೆ ಚುಚ್ಚಿದರೂ ಜಗತ್ತಿನ ಪರಿವೇ ಇಲ್ಲದೆ ಮೊಬೈಲ್ ನೋಡುತ್ತಾ ಕುಳಿತ ಕಾರ್ಮಿಕ

ಕಟ್ಟಡದ ಮೇಲಿನಿಂದ ಬಿದ್ದ ರಾಡ್ ಶರೀರಕ್ಕೆ ಚುಚ್ಚಿದರೂ ಜಗತ್ತಿನ ಪರಿವೇ ಇಲ್ಲದೆ ಮೊಬೈಲ್ ನೋಡುತ್ತಾ ಕುಳಿತ ಕಾರ್ಮಿಕ


ಥಾಣೆ: ಮೊಬೈಲ್ ನೋಡುತ್ತಾ ಕುಳಿತರೆ ಕೆಲವರಿಗೆ ಈ ಜಗತ್ತಿನ ಪರಿವೇ ಇರೋದಿಲ್ಲ. ಮೊಬೈಲ್ ಒಳಗಡೆ ಮುಳುಗಿ ಹೋಗುತ್ತಾರೆ. ಅಂತಹದ್ದೇ ಒಂದು ಆಘಾತಕಾರಿ ಘಟನೆಯೊಂದು ಬದ್ಲಾಪುರದಲ್ಲಿ ನಡೆದಿದೆ. ಇಲ್ಲಿನ ನಿರ್ಮಾಣ ಹಂತದ ಕಟ್ಟಡದ ಮೇಲಿನಿಂದ ಕಬ್ಬಿಣದ ರಾಡೊಂದು ಬಿದ್ದು ಕಾರ್ಮಿಕನ ಶರೀರದೊಳಗೆ ಹೊಕ್ಕಿತ್ತು. ಆತಂಕಕಾರಿ ವಿಚಾರವೆಂದರೆ, ಆತ ಈ ಸಂದರ್ಭ ಮೊಬೈಲ್ ನೋಡುತ್ತಾ ಕುಳಿತಿದ್ದರಿಂದ ರಾಡ್ ಬಿದ್ದಿರುವುದು ಆತನಿಗೆ ಗೊತ್ತೇ ಇರಲಿಲ್ಲ. ಆದರೆ ಅದೃಷ್ಟವಶಾತ್ ಇದೀಗ ಆತ ಅಪಾಯದಿಂದ ಪಾರಾಗಿದ್ದಾನೆ.

ಕಾರ್ಮಿಕರು ಇಲ್ಲಿನ ಕಟ್ಟಡವೊಂದರ ಶಾಪಿಂಗ್ ಮಾರ್ಟ್‌ನಲ್ಲಿ ಸಿಸಿಟಿವಿ ಅಳವಡಿಸುತ್ತಿದ್ದಾಗ ಶನಿವಾರ ಈ ಘಟನೆ ನಡೆದಿದೆ. ರಾಡ್ ಕೆಳಗೆ ಬೀಳುತ್ತಿರುವ ಸಂದರ್ಭದ ಫೋಟೋವನ್ನು ಕೆಲವರು ಮೊಬೈಲ್ ತಗೆದಿದ್ದು, ಈ ಫೋಟೊ ಎಲ್ಲೆಡೆ ವೈರಲ್ ಆಗುತ್ತಿದೆ.

ಬದ್ಲಾಪುರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ಪಡ್ವಾಲ್ ಈ ಬಗ್ಗೆ ಪ್ರತಿಕ್ರಿಯಿಸಿ, "ಠಾಣೇಕರ್ ಪಲಾಸಿಯೋ ವಸತಿ ಕಾಮಗಾರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಾರ್ಮಿಕ ಸತ್ಯಪ್ರಕಾಶ್ ತಿವಾರಿ(26) ಶನಿವಾರ ಸಂಜೆ 4:30ರ ಸುಮಾರಿಗೆ ಮಾರ್ಟ್‌ನ ಹೊರಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸುತ್ತಿದ್ದರು. ಆದರೆ 8ನೇ ಮಹಡಿಯಿಂದ ಕಬ್ಬಿಣದ ರಾಡ್ ಬಿದ್ದು ಆತನನ್ನು ಚುಚ್ಚಿದಾಗ ತಿವಾರಿ ಅವರನ್ನು ತಕ್ಷಣ ದಾರಿಹೋಕರು ಚಿಕಿತ್ಸೆಗಾಗಿ ನಿರ್ಮಲ್ ಆಸ್ಪತ್ರೆಗೆ ಕರೆದೊಯ್ದರು. ತಿವಾರಿ ಅವರ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಹೇಳಿದರು.

ಈ ಬಗ್ಗೆ ಇದುವರೆಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ, ಪ್ರಕರಣ ದಾಖಲಾದ ನಂತರ ಶೀಘ್ರ ಕ್ರಮ ಕೈಗೊಳ್ಳುತ್ತೇವೆ ಎಂದು ಪಡ್ವಾಲ್ ತಿಳಿಸಿದ್ದಾರೆ. 

Ads on article

Advertise in articles 1

advertising articles 2

Advertise under the article