ಏಳು ತಿಂಗಳ ಹಿಂದೆಯಷ್ಟೇ ವಿವಾಹವಾದ ಯುವತಿ: ಪತಿಯಿಂದಲೇ ಚೂರಿ ಇರಿದು ಹತ್ಯೆ
Thursday, April 13, 2023
ದೊಡ್ಡಬಳ್ಳಾಪುರ: ಏಳು ತಿಂಗಳ ಹಿಂದೆಯಷ್ಟೇ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿದ್ದ ಯುವತಿಯರ್ವಳು ಪತಿಯಿದಲೇ ಹತ್ಯೆಯಾಗಿರುವ ದುರ್ಘಟನೆ ನಗರದ ಶ್ರೀನಗರದ ಖಾಸಗಿ ಶಾಲೆ ಬಳಿ ನಡೆದಿದೆ.
ತಮಿಳುನಾಡು ಕನ್ಯಾಕುಮಾರಿ ಮೂಲದ ಜನಿಲಾ ಜೋಬಿಯಾ (22) ಮೃತಪಟ್ಟ ಯುವತಿ. ಶ್ರೀನಗರದ ಸ್ಯಾಮ್ ಹತ್ಯೆಗೈದ ಆರೋಪಿ.
ಜನಿಲಾ ಜೋಬಿಯಾರಿಗೆ ಏಳು ತಿಂಗಳ ಹಿಂದೆಯಷ್ಟೇ ಶ್ರೀನಗರದ ಸ್ಯಾಮ್ ನೊಂದಿಗೆ ವಿವಾಹವಾಗಿತ್ತು. ಮಂಗಳವಾರ ರಾತ್ರಿ ದಂಪತಿ ನಡುವೆ ಜಗಳ ನಡೆದಿದೆ. ಈ ಜಗಳ ತಾರಕಕ್ಕೇರಿ ಪತಿ ಸ್ಯಾಮ್ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಸೊಸೆಯನ್ನು ರಕ್ಷಿಸಲು ಮುಂದಾದ ತಂದೆ- ತಾಯಿಯ ಮೇಲೂ ಸ್ಯಾಮ್ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿಯನ್ನು ಸ್ಯಾಮ್‌ನೇ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜನಿಲಾ ಜೋಬಿಯಾ ಸಾವನಪ್ಪಿದ್ದಾರೆ ಎನ್ನಲಾಗಿದೆ.