-->
ಕಾಲೇಜು ಫೆಸ್ಟ್ ಸಂದರ್ಭ ಎರಡು ಗುಂಪುಗಳ ನಡುವೆ ಮಾರಾಮಾರಿ - ಓರ್ವ ವಿದ್ಯಾರ್ಥಿ ಕೊಲೆ

ಕಾಲೇಜು ಫೆಸ್ಟ್ ಸಂದರ್ಭ ಎರಡು ಗುಂಪುಗಳ ನಡುವೆ ಮಾರಾಮಾರಿ - ಓರ್ವ ವಿದ್ಯಾರ್ಥಿ ಕೊಲೆ



ಬೆಂಗಳೂರು: ಕಾಲೇಜು ಫೆಸ್ಟ್ ನಲ್ಲಿ ಎರಡು ತಂಡಗಳ ನಡುವೆ ನಡೆದಿರುವ ಮಾರಾಮಾರಿಯು ಕಾಲೇಜು ವಿದ್ಯಾರ್ಥಿಯೋರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬಾಗಲೂರು ಠಾಣಾ ವ್ಯಾಪ್ತಿಯ ರೇವಾ ಕಾಲೇಜಿನಲ್ಲಿ ನಡೆದಿದೆ.

ರೇವಾ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಗುಜರಾತ್ ಮೂಲದ ಭಾಸ್ಕರ್ ಜೆಟ್ಟಿ (22) ಮೃತಪಟ್ಟ ವಿದ್ಯಾರ್ಥಿ.

ರೇವಾ ಕಾಲೇಜಿನಲ್ಲಿ ಕಾಲೇಜು ಫೆಸ್ಟ್ ನಡೆಯುತ್ತಿತ್ತು.‌ ಈ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಈ ಇತ್ತಂಡಗಳ ಮಾರಾಮಾರಿಯಲ್ಲಿ ಎದುರು ತಂಡವು ಭಾಸ್ಕರ್ ಜೆಟ್ಟಿಗೆ ಚಾಕುವಿನಿಂದ ಇರಿದಿದೆ. ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನೆ ನಡೆದ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಬಾಗಲೂರು ಪೊಲೀಸರು ಕಾಲೇಜು ಸಿಸಿಟಿವಿ ಪರಿಶೀಲಿಸುತ್ತಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Ads on article

Advertise in articles 1

advertising articles 2

Advertise under the article