ಮಂಗಳೂರು ಬೇಕಿಂಗ್ ಕಂಪನಿಯ ಮಾಲಕಿ ಓಶಿನ್ ಪೆರೇರಾ (Oshin Pereira) ಥಾಯ್ಲೆಂಡ್‌ನಲ್ಲಿ ಸಾವು
Tuesday, April 11, 2023
ಮಂಗಳೂರು: ಎಪ್ರಿಲ್ 11ರಂದು ಥಾಯ್ಲೆಂಡ್‌ನಲ್ಲಿ ಸ್ಕೂಬಾ ಡೈವಿಂಗ್ ವೇಳೆ ಉದಯೋನ್ಮುಖ ಉದ್ಯಮಿ ಓಶಿನ್ ಪೆರೇರಾ (26) ಮೃತಪಟ್ಟ ದಾರುಣ ಘಟನೆ ನಡೆದಿದೆ.
ಓಶಿನ್ ಪಿರೇರಾ ಗೋರಿಗುಡ್ಡದ ದಿವಂಗತ ಆಸ್ಕರ್ ಮಾರ್ಟಿನ್ ಪಿರೇರಾ ಮತ್ತು ಒಲಿವಿಯಾ ಪಿರೇರಾ ಅವರ ಪುತ್ರಿಯಾಗಿದ್ದಾರೆ.
ಮೂಲಗಳ ಪ್ರಕಾರ ಓಶಿನ್ ರಜೆಯ ಮೇಲೆ ಥಾಯ್ಲೆಂಡ್‌ಗೆ ತೆರಳಿದ್ದರು. ಥಾಯ್ಲೆಂಡ್‌ನಲ್ಲಿ ಸ್ಕೂಬಾ ಡೈವಿಂಗ್‌ನಲ್ಲಿದ್ದಾಗ ಈ ದುರಂತವು ಸಂಭವಿಸಿದೆ.
ಅವರು ಮಂಗಳೂರಿನ “ಬೇಕಿಂಗ್ ಕಂಪನಿ"ಯ ಮಾಲಕಿಯಾಗಿದ್ದಾರೆ
ಇವರ ಕುಟುಂಬವು ನಗರದ ಹಂಪನಕಟ್ಟೆಯಲ್ಲಿ ಅತ್ಯಂತ ಪ್ರಸಿದ್ಧವಾದ 'ಪಿರೇರಾ ರೆಸ್ಟೋರೆಂಟ್' ಅನ್ನು ಹೊಂದಿದೆ.
ಮೃತರು, ತಾಯಿ, ಸಹೋದರ ಓಸ್ಟೋರ್ನ್ ಪಿರೇರಾ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.