-->
ಮಹಿಳೆಯರ ಖಾಸಗಿ ಅಂಗಗಳ ಬಗ್ಗೆ ಯಾರಾದರೂ ಮಾತನಾಡಿದ್ದಲ್ಲಿ ಗುಂಡು ಹಾರಿಸುವೆ - ನಟಿ ರಾಧಿಕಾ ಅಪ್ಟೆ

ಮಹಿಳೆಯರ ಖಾಸಗಿ ಅಂಗಗಳ ಬಗ್ಗೆ ಯಾರಾದರೂ ಮಾತನಾಡಿದ್ದಲ್ಲಿ ಗುಂಡು ಹಾರಿಸುವೆ - ನಟಿ ರಾಧಿಕಾ ಅಪ್ಟೆ


ಮುಂಬೈ: ಸ್ತನಗಳ ಗಾತ್ರದ ಬಗ್ಗೆ ಎದುರಿಸಿರು ಟೀಕೆಗಳ ಕುರಿತು ಕೆಂಡಾಮಂಡಲವಾಗಿರುವ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಇತ್ತೀಚೆಗೆ ಮಾಧ್ಯಮ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೆಲ್ಲೂರು ಜಿಲ್ಲೆಯ ಮೂಲದ ನಟಿ ರಾಧಿಕಾ ಆಪ್ಟೆ ಬಾಲಿವುಡ್ ನ ಪ್ರಖ್ಯಾತ ನಟಿ. 'ವಾವ್! ಲೈಫ್ ಹೋ ತೋ ಐಸಿ!' ಬಾಲಿವುಡ್ ಸಿನಿಮಾದ ಮೂಲಕ ಬೆಳ್ಳಿತೆರೆಗೆ ರಾಧಿಕಾ ಪದಾರ್ಪಣೆ ಮಾಡಿದ ಇವರು 2012ರಲ್ಲಿ ಪ್ರಕಾಶ್ ರಾಜ್ ಅಭಿನಯದ ಧೋನಿ ಸಿನಿಮಾದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆ ಬಳಿಕ 2013ರಲ್ಲಿ ಕಾರ್ತಿ, ಕಾಜಲ್ ಅಗರ್ವಾಲ್, ಸಂತಾನಂ, ಪ್ರಭು ಮತ್ತು ಶರಣ್ಯ ಅಭಿನಯದ ಆಲ್ ಇನ್ ಆಲ್ ಆಖೋ ರಾಜ ಚಿತ್ರದಲ್ಲಿ ನಟಿಸಿದರು. ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 2014 ರಲ್ಲಿ ಬಿಡುಗಡೆಯಾದ ವೆಟ್ರಿ ಸೆಲ್ವನ್ ಅವರ ಕಬಾಲಿಯಲ್ಲಿ ನಟಿಸಿದರು.

ಇತ್ತೀಚೆಗೆ ತಮ್ಮ ಪಾತ್ರಕ್ಕೆ ಪ್ರಾಮುಖ್ಯತೆ ನೀಡುವ ಯಾವುದೇ ಪಾತ್ರದಲ್ಲಾದರೂ ರಾಧಿಕಾ ಅಪ್ಟೆ ಬೋಲ್ಡ್ ಆಗಿ ನಟಿಸುತ್ತಿದ್ದಾರೆ. ಆದ್ದರಿಂದ ಅವರು ಕೆಲವು ಸಿನಿಮಾಗಳಲ್ಲಿ ಬೆತ್ತಲೆಯಾಗಿಯೂ ನಟಿಸಿದ್ದಾರೆ. ಅಂತೆಯೇ ಅವರ ಎಲ್ಲಾ ಇಂಟಿಮೇಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿ ಭಾರೀ ವಿವಾದವನ್ನು ಸೃಷ್ಟಿಸಿದ್ದವು. 

ಇತ್ತೀಚೆಗೆ ರಾಧಿಕಾ ಆಪ್ಟೆ ಸಂದರ್ಶನವೊಂದರಲ್ಲಿ ತಮ್ಮ ಸಿನಿಮಾ ಆರಂಭದಲ್ಲಿ ಎದುರಿಸಿದ್ದ ಟೀಕೆಗಳ ಬಗ್ಗೆ ಮಾತನಾಡಿದ್ದಾರೆ. ರಾಧಿಕಾ ಅಪ್ಟೆ ಸಿನಿಮಾ ವೃತ್ತಿಜೀವನವನ್ನು ಬಾಲಿವುಡ್‌ನಿಂದ‌ ಪ್ರಾರಂಭಿಸಿದ್ದರು. ಆಗ ಅವರ ಮೂಗಿನ ರಚನೆ ಸರಿಯಾಗಿಲ್ಲ ಹಾಗೂ ಸ್ತನಗಳು ದೊಡ್ಡದಾಗಿಲ್ಲವೆಂದು ಹಲವರು ಟೀಕಿಸುತ್ತಿದ್ದರಂತೆ. ಅಲ್ಲದೆ, ಸ್ತನಗಳನ್ನು ದೊಡ್ಡದು ಮಾಡಿಕೊಂಡು ನಟಿಸುವಂತೆ ಅನೇಕರು ಸಲಹೆ ನೀಡಿದ್ದಾರಂತೆ.

ಸ್ತನಗಳನ್ನು ರಚನೆಯನ್ನು ದೊಡ್ಡದು ಮಾಡಿಕೊಂಡ ಕಾರಣ ರಾಧಿಕಾ ದೇಹದ ತೂಕವೂ 3 - 4 ಕೆಜಿಯಷ್ಟು ಹೆಚ್ಚಿದೆ. ತೂಕ ಹೆಚ್ಚಾದ ಕಾರಣ ಅವರು ಸಿನಿಮಾ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರಂತೆ. ಇದರಿಂದ ಸಿಡಿಮಿಡಿಗೊಂಡಿರುವ ರಾಧಿಕಾ ಅಪ್ಟೆ ಮಹಿಳೆಯರ ದೇಹವನ್ನು ಟೀಕಿಸುವುದು ತಮ್ಮ ಹಕ್ಕು ಎಂದು ಕೆಲವರು ಭಾವಿಸುತ್ತಾರೆ. ಆದರೆ ಯಾರಾದರೂ ಹಾಗೆ ಮಾತನಾಡಿದರೆ ಗುಂಡು ಹಾರಿಸುತ್ತೇನೆ ಎಂದು ಹೇಳಿದ್ದಾರೆ. ಸದ್ಯ ರಾಧಿಕಾ ಆಪ್ಟೆ ಹೇಳಿಕೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Ads on article

Advertise in articles 1

advertising articles 2

Advertise under the article