ಎಪ್ರಿಲ್ 28ರಂದು ಸಹ್ಯಾದ್ರಿಯಲ್ಲಿ ಅಧ್ಯಾಪಕರ ಕೌಶಲ್ಯ ವೃದ್ದಿ ಕಾರ್ಯಕ್ರಮ (FDP)
ಎಪ್ರಿಲ್ 28ರಂದು ಸಹ್ಯಾದ್ರಿಯಲ್ಲಿ ಅಧ್ಯಾಪಕರ ಕೌಶಲ್ಯ ವೃದ್ದಿ ಕಾರ್ಯಕ್ರಮ (FDP)
ನೂತನ ಶಿಕ್ಷಣ ನೀತಿ (NEP-2020)ಯ ಭಾಗವಾಗಿ ಒಂದು ದಿನದ ಅಧ್ಯಾಪಕರ ಕೌಶಲ್ಯ ವೃದ್ಧಿ ಕಾರ್ಯಕ್ರಮ ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಎಪ್ರಿಲ್ 28ರಂದು ನಡೆಯಲಿದೆ.
ಆರ್ಟಿಫೀಷಿಯಲ್ ಇಂಟೆಲಿಜೆನ್ಸಿ ಮತ್ತು ಕ್ಲೌಡ್ ಬಳಸಿ ಪವರ್ ಬಿಐನೊಂದಿಗೆ ಡೇಟಾ-ಒಳನೋಟಗಳು ಈ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿದೆ.
ಆರ್ಟಿಫೀಷಿಯಲ್ ಇಂಟೆಲಿಜೆನ್ಸಿ, ಸೈಬರ್ ಭದ್ರತೆ, ಡೇಟಾ ಸೈನ್ಸ್, ರೋಬೋಟಿಕ್ಸ್ ಮತ್ತು ಇತರ ಭವಿಷ್ಯದ ಕೌಶಲ್ಯಗಳ ಮೇಲೆ ಕಡ್ಡಾಯವಾದ ಕೌಶಲ್ಯ ವರ್ಧನೆಯ ಕೋರ್ಸ್‌ಗಳನ್ನು ಅನೇಕ ವಿಶ್ವವಿದ್ಯಾನಿಲಯಗಳು ಜಾರಿಗೆ ತಂದಿವೆ. ಭವಿಷ್ಯದ ಕೌಶಲ್ಯಗಳನ್ನು ನೀಡುವ, ಅದಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಕಾರ್ಯಕ್ರಮದ ಅಗತ್ಯವಿದೆ.
ಈ ಬಗ್ಗೆ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಸೀಮಿತ ಸಂಖ್ಯೆಯ ಅಧ್ಯಾಪಕರಿಗೆ ನೋಂದಣಿ ಪ್ರಾರಂಭವಾಗಿದೆ. ಸ್ವಾಗತ ಕಿಟ್, ಊಟ-ಉಪಹಾರ ಹಾಗೂ ಭಾಗವಹಿಸುವಿಕೆಯ ಪ್ರಮಾಣ ಪತ್ರವೂ ಇದರೊಂದಿಗೆ ಒಳಗೊಂಡಿದೆ.
ಹೆಚ್ಚಿನ ಮಾಹಿತಿಗೆ 96320 53663 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.