-->
ಮಂಗಳೂರು: ನನ್ನ ಹತ್ಯೆಯಾದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಸಂಘಪರಿವಾರದವರೇ ನೇರ ಹೊಣೆ - ಗಂಭೀರ ಆರೋಪ

ಮಂಗಳೂರು: ನನ್ನ ಹತ್ಯೆಯಾದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಸಂಘಪರಿವಾರದವರೇ ನೇರ ಹೊಣೆ - ಗಂಭೀರ ಆರೋಪ




ಮಂಗಳೂರು: ಚುನಾವಣಾ ನೆಪದಲ್ಲಿ ತನ್ನ ಭದ್ರತಾ ಸಿಬ್ಬಂದಿಯನ್ನು ಹಿಂಪಡೆದಿರುವ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರ  ಕೈವಾಡವಿದೆ. ಆದ್ದರಿಂದ ನನ್ನ ಹತ್ಯೆಯಾದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಘಪರಿವಾರದ ಪ್ರಮುಖರೇ ನೇರ ಹೊಣೆ ಎಂದು ಹಿಂದೂ ಸಂಘಟನೆಯ ಮುಖಂಡ ಸತ್ಯಜಿತ್‌ ಸುರತ್ಕಲ್ ಗಂಭೀರ ಆರೋಪ ಮಾಡಿದ್ದಾರೆ.




ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಮುಸ್ಲಿಂ ಮೂಲಭೂತವಾದಿಗಳಿಂದ ತನಗೆ ಬೆದರಿಕೆಯಿದೆ. ಈ ಹಿನ್ನೆಲೆಯಲ್ಲಿ ಕಳೆದ 16 ವರ್ಷಗಳ ಹಿಂದೆ ಸರಕಾರವೇ ತನಗೆ ಗನ್ ಮ್ಯಾನ್ ಒದಗಿಸಿತ್ತು. ಅಲ್ಲದೆ ವೈಯಕ್ತಿಕ ರಿವಾಲ್ವರ್ ನ ಪರವಾನಿಗೆಯನ್ನು ನೀಡಿತ್ತು. ಆದರೆ ಇಷ್ಟರವರೆಗೆ ಯಾವ ಕಾರಣಕ್ಕೂ ಹಿಂಪಡೆಯದ ಭದ್ರತಾ ವ್ಯವಸ್ಥೆ ಹಾಗೂ ರಿವಾಲ್ವರ್ ಅನ್ನು ಈ ಬಾರಿ ಹಿಂಪಡೆಯಲಾಗಿದೆ. ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತರ ಮಾಡಲಾಗಿದೆ. ಗೃಹ ಸಚಿವರವರೆಗೆ ಒತ್ತಡ ಹಾಕಿದ್ದರೂ ಪೊಲೀಸ್ ಭದ್ರತೆ ಹಿಂಡೆಯಲಾಗಿದೆ ಎಂದರೆ ಅದಕ್ಕೆ ಬಿಜೆಪಿ ರಾಜ್ಯಧ್ಯಕ್ಷರೇ ನೇರ ಹೊಣೆ ಎಂದು ಹೇಳಿದರು.

ಇಂದು ಕಾರ್ಯಕರ್ತರಿಂದ ಬೆದರಿಕೆ, ಕಾರ್ಯಕರ್ತರು ವಾಹನವನ ಅಲ್ಲಾಡಿಸಿರುದ್ದಕ್ಕೆ ಪೊಲೀಸ್ ಭದ್ರತೆ ವ್ಯವಸ್ಥೆ ಹೊಂದಿರುವವರ ಭದ್ರತೆ ವಾಪಸ್ ಪಡೆದಿಲ್ಲ. ಆದರೆ ಯಾರಿಗೆ ಸಮಾಜ ವಿರೋಧಿ ಶಕ್ತಿಗಳ ಬೆದರಿಕೆಯಿದೆಯೋ ಅವರ ಭದ್ರತಾ ವ್ಯವಸ್ಥೆಯನ್ನು ಹಿಂಪಡೆಯಲಾಗಿದೆ. ಹಿಂದೂ ಸಂಘಟನೆಯಲ್ಲಿರುವವರು ಇವರ ನಿರ್ಣಯದ ವಿರುದ್ಧ ಸ್ವರ ಎತ್ತಬಾರದೆಂಬ ಹಿನ್ನೆಲೆಯಲ್ಲಿ ಪ್ರಮುಖರನ್ನು ಟಾರ್ಗೆಟ್ ಮಾಡಲಾಗುತ್ತದೆ. ಈ ಮೂಲಕ ಸಾಮಾನ್ಯ ಕಾರ್ಯಕರ್ತರನ್ನು ಮೌನವಾಗಿಸುವ ಷಡ್ಯಂತರ ನಡೆಯುತ್ತಿದೆ. ಕಳೆದ ಕೆಲವು ವರ್ಷಗಳಿಂದ ತನ್ನ ಬಾಯಿ ಮುಚ್ಚಿಸುವ ಯತ್ನ ನಡೆದಿದೆ. ಯಾವುದಕ್ಕೂ ಜಗ್ಗದ ಹಿನ್ನೆಲೆಯಲ್ಲಿ ಪ್ರಾಣಭಯವನ್ನು ಒಡ್ಡುವ ಮೂಲಕ ಪರೋಕ್ಷವಾಗಿ ಬಾಯಿ ಮುಚ್ಚಿಸಲಾಗುತ್ತದೆ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷರ ಮೂಲಕದ ವ್ಯವಸ್ಥೆ ನನ್ನ ಹತ್ಯೆಗೆ ಪ್ರೇರಣೆ ಕೊಡುವ ಮುಕ್ತ ಅವಕಾಶವನ್ನು ಮಾಡುತ್ತಿದೆ. ಅಕಸ್ಮಾತ್ ರೀತಿಯಲ್ಲಿ ದುಷ್ಕರ್ಮಿಗಳಿಂದ ನನ್ನ ಹತ್ಯೆಯಾದಲ್ಲಿ ಯಾವುದೇ ಸಂಘಪರಿವಾರದ ನಾಯಕರು ನನ್ನ ಅಂತಿಮ ದರ್ಶನಕ್ಕೆ ಬರಬಾರದು. ಯಾವುದೇ ಕಾರಣಕ್ಕೆ ಮೃತದೇಹದ ಮೆರವಣಿಗೆಯನ್ನೂ ನಡೆಸಬಾರದೆಂದು ಸತ್ಯಜಿತ್‌ ಸುರತ್ಕಲ್ ಘೋಷಣೆ ಮಾಡಿದರು.



Ads on article

Advertise in articles 1

advertising articles 2

Advertise under the article