Subrahmanya :- ದರ್ಪಣ ತೀರ್ಥದಲ್ಲಿ ಜಲಚರಗಳ ಸಾವು..ಕಲುಷಿತ ನೀರು ನದಿಗೆ ಸೇರಿದ್ದೇ ಕಾರಣ?
Thursday, April 6, 2023
ಸುಬ್ರಹ್ಮಣ್ಯ
ಇಲ್ಲಿನ ವಾಲಗದಕೇರಿಯ ದರ್ಪಣ ತೀರ್ಥ ನದಿಯಲ್ಲಿ ಸಾವಿರಾರು ಮೀನುಗಳ ಸಹಿತ ಜಲಚರಗಳು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದ್ದು, ಕಲುಷಿತ ನೀರು ನದಿಗೆ ಸೇರಿರುವುದೇ ಘಟನೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.
ಕುಕ್ಕೆ ಸುಬ್ರಹ್ಮಣ್ಯದ ದರ್ಪಣ ತೀರ್ಥ ನದಿ ಕುಮಾರಧಾರಾಕ್ಕೆ ಸೇರುವ ಮಧ್ಯ ಭಾಗದ ವಾಲಗದ ಕೇರಿ ಪ್ರದೇಶದಲ್ಲಿದೇವರ ಮೀನುಗಳ ಸಹಿತ ಹಲವಾರು ಜಾತಿಯ ಮೀನುಗಳು ಹಾಗೂ ಜಲಚರಗಳು ಸಾವನ್ನಪ್ಪಿ ನೀರಿನಲ್ಲಿ ತೇಲುತ್ತಿರುವುದು, ದಡಕ್ಕೆ ಬಂದು ಬಿದ್ದಿರುವುದು ಕಂಡುಬಂದಿದೆ. ಭಾರೀ ಪ್ರಮಾಣದಲ್ಲಿ ಮೀನುಗಳ ಸಾವಿನಿಂದ ಸ್ಥಳೀಯರಲ್ಲಿ ಆತಂಕ ಮೂಡಿದೆ.
ವಸತಿಗಳ ಹಾಗೂ ಒಳಚರಂಡಿಯ ಕಲುಷಿತ, ನೀರು ಸೇರ್ಪಡೆ ಗೊಂಡಿರುವುದರಿಂದ ದರ್ಪಣ ತೀರ್ಥ ಮಲಿನಗೊಂಡಿದ್ದು, ನೀರಿನ ಬಣ್ಣವೂ ಕೊಳಚೆ ರೀತಿಯಲ್ಲಿ ಕಾಣುತ್ತಿದೆ. ಎಂಬ ದೂರು ಕೇಳಿಬಂದಿದೆ. ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು ಘಟನೆ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.