🛑ಬಿಜೆಪಿ ಪಟ್ಟಿ ಬಿಡುಗಡೆ ಬೆನ್ನಿಗೆ ಸಿಎಂ ಟೆಂಪಲ್ ರನ್🛑ಕುಕ್ಕೆಗೆ ಸಿಎಂ ಬಂದರೂ ಬಾರದ ಸಚಿವ ಅಂಗಾರ..🛑ಸಿಎಂಗೆ ಕುಕ್ಕೆ ಭೇಟಿ ವೇಳೆ ಮುನಿಸು ತೋರಿಸಿದ ಅಂಗಾರ
Wednesday, April 12, 2023
ಸುಬ್ರಹ್ಮಣ್ಯ: ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ 189 ಅಭ್ಯರ್ಥಿಗಳ ಪಟ್ಟಿಯನ್ನು ನಿನ್ನೆ ಬಿಡುಗಡೆ ಮಾಡಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಟೆಂಪಲ್ ರನ್ ನಡೆಸಿದರು.
ದ.ಕ ಜಿಲ್ಲೆಯ ಹಲವು ದೇವಸ್ಥಾನಕ್ಕೆ ಭೇಟಿ ನೀಡಿದ್ದೇನೆ. ಧರ್ಮಸ್ಥಳ, ಕೊಲ್ಲೂರು, ಕಟೀಲು ದೇವಸ್ಥಾನಗಳಿಗೆ ಹೆಚ್ಚಾಗಿ ಭೇಟಿ ನೀಡುತಿದ್ದು ಇಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ಕ್ಕೆ ಭೇಟಿ ನೀಡಿ ಕರ್ನಾಟಕ ಜನತೆಯ ಸುಭೀಕ್ಷೆಗಾಗಿ ಪ್ರಾರ್ಥಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಅವರು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಮಾದ್ಯಮದೊಂದಿಗೆ ಮಾತನಾಡಿದರು. ಧರ್ಮಸ್ಥಳಕ್ಕೆ ಆಗಮಿಸಿದ ಬಳಿಕ ಹೆಲಿಕಾಪ್ಟರ್ ಮೂಲಕ ಕಡಬದ ಬಿಳಿನೆಲೆಗೆ ಆಗಮಿಸಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಹಾಗೂ ಕಾರ್ಯನಿರ್ವಾಹಣಾಧಿಕಾರಿ ಡಾ. ನಿಂಗಯ್ಯ ಹೂಗುಚ್ಚ ನೀಡಿ ಅವರು ಸ್ವಾಗತಿಸಿದರು. ಮುಖ್ಯಮಂತ್ರಿ ಆಡಳಿತ ಕಛೇರಿಗೆ ತೆರಳಿ ವಸ್ರ್ತ ಬದಲಿಸಿ ದೇವಸ್ಥಾನಕ್ಕೆ ತೆರಳಿ ಶ್ರೀ ದೇವರಿಗೆ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಬಳಿಕ ಸಂಪುಟ ನರಸಿಂಹ ಸ್ವಾಮಿ ದೇವರ ದರ್ಶನ ಪಡೆದರು. ಹೊಸಲಿಗಮ್ಮ ದೈವದ ದರ್ಶನ ಪಡೆದು ಅಲ್ಲಿಂದ ನಿರ್ಗಮಿಸಿದರು. ಮುಖ್ಯಮಂತ್ರಿ ಅವರು ದೇಗುಲಕ್ಕೆ ಆಗಮಿಸುತ್ತಿದ್ದಂತೆ ಮಳೆಯ ಸಿಂಚನ ಆಗಿರುವುದು ವಿಶೇಷವಾಗಿತ್ತು.
ಸಚಿವ ಅಂಗಾರ ಗೈರು
ಮುಖ್ಯಮಂತ್ರಿ ಗಳು ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಬಂದರೂ ಸಚಿವ ಅಂಗಾರ ಗೈರು ಆಗುವ ಮೂಲಕ ಮುನಿಸು ತೋರಿಸಿಕೊಂಡಿದ್ದಾರೆ. ಸಚಿವ ಅಂಗಾರ ಅವರ ಕ್ಷೇತ್ರದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಮುಖ್ಯಮಂತ್ರಿ ಬರುವ ವೇಳೆ ಆ ಕ್ಷೇತ್ರದವರೆ ಆಗಿರುವ ಸಚಿವ ಅಂಗಾರ ಭಾಗವಹಿಸಬೇಕಿತ್ತು. ಆದರೆ ವಿಧಾನಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡದಿರುವ ಕೋಪದಲ್ಲಿರುವ ಅಂಗಾರ ಮುಖ್ಯಮಂತ್ರಿ ಗಳ ಆಗಮನದ ವೇಳೆ ಗೈರು ಹಾಜರಾಗಿ ಮುನಿಸು ತೋರಿಸಿದರು