ಮಲ್ಲಿಗೆ ಹೂವಿನಿಂದಲೇ ಮಾಡಿರುವ ಸ್ಕರ್ಟ್ ತೊಟ್ಟುಕೊಂಡ ಉರ್ಫಿ ಜಾವೇದ್
Monday, April 10, 2023
ಮುಂಬೈ: ತಾನು ತೊಟ್ಟುಕೊಳ್ಳುವ ವಿಚಿತ್ರ ಮತ್ತು ವಿಭಿನ್ನ ಬಟ್ಟೆಗಳ ಮೂಲಕ ಬಾಲಿವುಡ್‌ನಲ್ಲಿ ಸಂಚಲನ ಮೂಡಿಸುತ್ತಿರುವ ನಟಿ ಉರ್ಫಿ ಜಾವೇದ್ ಇದೀಗ ಹೊಸ ಅವತಾರದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ. ಮಲ್ಲಿಗೆ ಹೂವಿನಿಂದ ಬಟ್ಟೆ ಮಾಡಿಕೊಂಡು ತೊಟ್ಟಿಕೊಂಡಿರುವ ನಟಿ ಉರ್ಫಿ ಜಾವೇದ್ ಕುರಿತಾಗಿ ನೆಟ್ಟಿಗರು ಗರಂ ಆಗಿದ್ದಾರೆ.
ಯಾವುದು ಯಾವುದರಲ್ಲೋ ಐಟಂಗಳಲ್ಲಿ ಬಟ್ಟೆಗಳನ್ನು ಮಾಡಿ ತೊಟ್ಟುಕೊಳ್ಳುವ ಕಲೆ ಉರ್ಫಿ ಜಾವೇದ್‌ಗೆ ಮಾತ್ರ ಗೊತ್ತು. ಇದೀಗ ಆಕೆ ಮಲ್ಲಿಗೆ ಹೂವಿನಿಂದಲೇ ಬಟ್ಟೆ ಮಾಡಿ ಧರಿಸಿದ್ದಾರೆ. ಟಾಪ್‌ಲೆಸ್ ಆಗಿರುವ ಉರ್ಫಿ ಮಲ್ಲಿಗೆ ಹೂವಿನ ಸ್ಕರ್ಟ್ ಮಾಡಿಕೊಂಡಿದ್ದಾರೆ. ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಟೀಕೆ ಮಾಡಿದ್ದಾರೆ. ಆದರೆ, ಇದಕ್ಕೆಲ್ಲಾ ಉರ್ಫಿ ಜಾವೇದ್ ತಲೆಕೆಡಿಸಿಕೊಂಡಿಲ್ಲ.
ನಟಿ ಉರ್ಫಿ ಜಾವೇದ್ ಚಿತ್ರ-ವಿಚಿತ್ರ ಬಟ್ಟೆ ತೊಟ್ಟುಕೊಂಡು ಕಾಣಿಸಿಕೊಳ್ಳೋದು ಮಿತಿಮೀರಿದೆ. ಉರ್ಫಿ ವಿಚಿತ್ರ ಬಟ್ಟೆ ನೋಡಿ ಜನರು ಕೂಡ ರೋಸಿ ಹೋಗಿದ್ದಾರೆ. ಅಶ್ಲೀಲತೆ ಮೆರೆಯುತ್ತಿದ್ದಾರೆ ಅನ್ನೋದು ಅನೇಕರ ಅಭಿಪ್ರಾಯವಾಗಿದೆ.