ಆಟವಾಡುತ್ತಿದ್ದ 13 ತಿಂಗಳ ಮಗು ನೀರು ತುಂಬಿದ ಬಕೆಟ್ ನೊಳಗೆ ಬಿದ್ದು ದಾರುಣ ಸಾವು
Wednesday, May 31, 2023
ಭೋಪಾಲ್: ತುಂಟತನದಿಂದ ಆಡವಾಡುತ್ತಿದ್ದ 13 ತಿಂಗಳ ಮುದ್ದಾದ ಮಗುವೊಂದು ನೀರು ತುಂಬಿದ ಬಕೆಟ್ ಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆಯೊಂದು ಭೋಪಾಲ್‌ನ ಗೇಹುನ್ ಖೇಡಾ ಬಳಿ ನಡೆದಿದೆ.
ಮುದ್ದಾಸಿರ್ ಖಾನ್ ಮೃತಪಟ್ಟ ಹಸುಗೂಸು. ಈ 13 ತಿಂಗಳ ಮಗು ನೀರು ತುಂಬಿದ ಬಕೆಟ್‌ನಲ್ಲಿ ಬಿದ್ದಿತ್ತು. ತಕ್ಷಣ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಕುಟುಂಬಸ್ಥರು ಹಾಗೂ ಹೆತ್ತವರ ರೋಧನೆ ಮುಗಿಲು ಮುಟ್ಟಿದೆ.
ಮಗುವಿನ ಹೆತ್ತವರು ತಮ್ಮ ಮುದ್ದಾದ ಕೂಸು ಮುದ್ದಾಸಿರ್ ಖಾನ್ ನನ್ನು ಕರೆದುಕೊಂಡು ಸಂಬಂಧಿಕರ ಮನೆಗೆ ಹೋಗಿದ್ದರು. ಮಗುವನ್ನು ಆಟವಾಡಲು ಬಿಟ್ಟು ದಂಪತಿ ಮಾತನಾಡುವುದರಲ್ಲಿ ನಿರತರಾಗಿದ್ದರು. ಆದರೆ ಮುದ್ದಸಿರ್ ಖಾನ್ ಕೋಣೆಯಿಂದ ಹೊರಬಂದು ಅಂಗಳದಲ್ಲಿ ಇಟ್ಟಿದ್ದ ಬಕೆಟ್‌ನಲ್ಲಿ ಆಟವಾಡಲು ಪ್ರಾರಂಭಿಸಿದೆ.
ಆಟವಾಡುತ್ತಿದ್ದಾಗ ಬಕೆಟ್‌ನಲ್ಲಿ ತಲೆಕೆಳಗಾಗಿ ಮಗು ಬಿದ್ದಿದೆ. ಪೋಷಕರು ನೀರಿನಲ್ಲಿ ಬಿದ್ದಿರುವುದನ್ನು ಗಮನಿಸಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತ ಪಟ್ಟಿದೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಅನುಮಾನಾಸ್ಪದ ವಿಚಾರ ಏನೂ ಕಂಡುಬಂದಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.