-->
ಈಕೆಯ ತಿಂಗಳ ಸಂಬಳ 30,000: ಆದರೂ 7ಕೋಟಿ ರೂ. ಆಸ್ತಿ ಗಳಿಕೆ ಮಹಿಳಾ ಅಧಿಕಾರಿಯ ಕಮಾಲ್

ಈಕೆಯ ತಿಂಗಳ ಸಂಬಳ 30,000: ಆದರೂ 7ಕೋಟಿ ರೂ. ಆಸ್ತಿ ಗಳಿಕೆ ಮಹಿಳಾ ಅಧಿಕಾರಿಯ ಕಮಾಲ್



ಭೋಪಾಲ್: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪದ ಮೇಲೆ ಮಧ್ಯಪ್ರದೇಶ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್‌ನಲ್ಲಿ (ಗುತ್ತಿಗೆ ಮೇರೆಗೆ) ಕೆಲಸ ಮಾಡುತ್ತಿದ್ದ ಸಬ್ ಇಂಜಿನಿಯರ್ ಹೇಮಾ ಮೀನಾ ನಿವಾಸದ ಮೇಲೆ ಗುರುವಾರ ಬೆಳಗ್ಗೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ.

ವಿದಿಶಾ, ರೈಸನ್ ಮತ್ತು ಭೋಪಾಲ್‌ನಲ್ಲಿರುವ ಆಕೆಯ ಮಾಲಕತ್ವದ ಸ್ಥಳಗಳ ಮೇಲೂ ದಾಳಿ ನಡೆದಿದೆ. ಈವರೆಗೆ 7 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಸಬ್ ಇಂಜಿನಿಯರ್ ಹೇಮಾ ಮೀನಾ ಮಾಸಿಕ ವೇತನ ಕೇವಲ 30 ಸಾವಿರ ರೂ. ಆಗಿದೆ. ಆದರೂ ಆಕೆ ಕೋಟಿಗಟ್ಟಲೆ ಆಸ್ತಿ ಹೊಂದಿದ್ದಾಳೆ. ಹೇಮಾ ಮೀನಾ ಬಿರಿಯಾದಲ್ಲಿ 20,000 ಚದರ ಅಡಿ ಜಾಗವನ್ನು ತಂದೆಯ ಹೆಸರಿನಲ್ಲಿ ತೆಗೆದುಕೊಂಡಿದ್ದಾರೆ. 1 ಕೋಟಿ ರೂ. ಮೌಲ್ಯದ ಮನೆಯನ್ನು ಸಹ ಕಟ್ಟಿಸಿದ್ದಾರೆ.

ಇದಲ್ಲದೆ ಆಕೆ ರೈಸನ್ ಮತ್ತು ವಿದಿಶಾದಲ್ಲಿ ಕೋಟ್ಯಂತರ ರೂ. ಬೆಲೆಯ ಜಮೀನು ಕೊಂಡುಕೊಂಡಿದ್ದಾರೆ. ಈವರೆಗೆ ಸುಮಾರು 5ರಿಂದ 7 ಕೋಟಿ ರೂ. ಮೌಲ್ಯದ ಆಸ್ತಿ ಬಯಲಿಗೆ ಬಂದಿದೆ. ಬೆಳಗ್ಗೆ 6 ಗಂಟೆಯಿಂದ ಲೋಕಾಯುಕ್ತರ ದಾಳಿ ಕಾರ್ಯಾಚರಣೆ ನಡೆಯುತ್ತಿದ್ದು, ಆದಾಯಕ್ಕಿಂತ 230 ಪಟ್ಟು ಆಸ್ತಿ ಹೊಂದಿರುವುದು ಬಹಿರಂಗವಾಗಿದೆ. ವಾಸ್ತವವಾಗಿ ಹೇಮಾ ಮೀನಾ ವಿರುದ್ಧ 2020ರಲ್ಲಿಅಕ್ರಮ ಆಸ್ತಿ ಗಳಿಕೆಯ ದೂರು ಬಂದಿತ್ತು. ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ತನಿಖೆ ನಡೆಸುತ್ತಿತ್ತು.

ಲೋಕಾಯುಕ್ತ ಕಮಾಂಡರ್, ಡಿಎಸ್‌ಪಿ ಸಂಜಯ್ ಶುಕ್ಲಾ ಸುದ್ದಿಗಾರರ ಜತೆ ಮಾತನಾಡಿ, ಹೇಮಾ ಮೀನಾ ವಿರುದ್ಧ ದೂರು ಸ್ವೀಕರಿಸಿದಂದಿನಿಮದ ಲೋಕಾಯುಕ್ತ ವಿಶೇಷ ಪೊಲೀಸ್ ವಿಭಾಗ ತನಿಖೆಯನ್ನು ಪ್ರಾರಂಭಿಸಿದೆ. ಹೇಮಾ ತನ್ನ ತಂದೆಯ ಹೆಸರಿಗೆ 20,000 ಚದರ ಅಡಿ ಭೂಮಿಯನ್ನು ವರ್ಗಾಯಿಸಿದ್ದಾರೆ. ಆದರೆ ಅದನ್ನು ಬಿಬ್ಬಿರಿಯಾದಲ್ಲಿ ಖರೀದಿಸಲಾಗಿದೆ. ಇದಾದ ಬಳಿಕ ಒಂದು ಕೋಟಿ ರೂ. ಖರ್ಚು ಮಾಡಿ ಮನೆ ಕಟ್ಟಿಸಿಕೊಂಡಿದ್ದಾರೆ.

ಇದರೊಂದಿಗೆ ವಿದಿಶಾ, ರೈಸನ್ ಮತ್ತು ಭೋಪಾಲ್‌ನಲ್ಲಿ ವಿವಿಧ ಸ್ಥಳಗಳಲ್ಲಿ ಭೂಮಿಯನ್ನು ಖರೀದಿಸಲಾಗಿದೆ. ಟ್ರ್ಯಾಕ್ಟರ್, ಭತ್ತ ಬಿತ್ತುವ ಯಂತ್ರ, ಕಟಾವು ಯಂತ್ರ ಸೇರಿದಂತೆ ಹಲವು ಕೃಷಿ ಉಪಕರಣಗಳನ್ನು ಖರೀದಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಆಕೆ ಕೇವಲ 30 ಸಾವಿರ ರೂ. ಸಂಬಳ ಪಡೆಯುತ್ತಿದ್ದರೂ ಯಾವುದೇ ಆಸ್ತಿಯನ್ನು ತೆಗೆದುಕೊಂಡರೂ ಅದು ಅವರ ಆದಾಯಕ್ಕಿಂತ 230 ಪಟ್ಟು ಹೆಚ್ಚು ಇದೆ. ಹೇಮಾ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article