-->

ಬಾಯ್ಕಾಟ್ ಗೆ ಜಗ್ಗದೆ ಮೂರು ದಿನಗಳಲ್ಲಿ 35 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ 'ದಿ ಕೇರಳ ಸ್ಟೋರಿ'

ಬಾಯ್ಕಾಟ್ ಗೆ ಜಗ್ಗದೆ ಮೂರು ದಿನಗಳಲ್ಲಿ 35 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ 'ದಿ ಕೇರಳ ಸ್ಟೋರಿ'


ಬೆಂಗಳೂರು: ಬಿಡುಗಡೆಗೂ ಮುನ್ನ ಭಾರೀ ವಿವಾದಕ್ಕೀಡಾಗಿ ಬ್ಯಾನ್ ಮಾಡಬೇಕೆಂಬ ಆಗ್ರಹ ಕೇಳಿ ಬಂದಿರುವ ಸಿನಿಮಾ 'ದಿ ಕೇರಳ ಸ್ಟೋರಿ' ಕೇವಲ ಮೂರು ದಿನಗಳಲ್ಲಿ 35ಕ್ಕೂ ಅಧಿಕ ಕೋಟಿ ಗಳಿಕೆ ಮಾಡಿದೆ.

ಅದಾ ಶರ್ಮಾ ಅಭಿನಯದ, ಸುದೀಪ್ತೋ ಸೇನ್ ನಿರ್ದೇಶನದ ನೈಜ ಘಟನೆಯಾಧಾರಿತ 'ದಿ ಕೇರಳ ಸ್ಟೋರಿ' ಸಿನಿಮಾ ರಿಲೀಸ್‌ಗೂ ಮೊದಲೇ ಟೀಸರ್ ನಲ್ಲೇ ವಿವಾದಕ್ಕೀಡಾಗಿತ್ತು. ಕೇರಳದ 32 ಸಾವಿರಕ್ಕೂ ಅಧಿಕ ಮಂದಿ ಯುವತಿಯರನ್ನು ಮತಾಂತರ ಮಾಡಿ ಐಸಿಸ್ ಪರ ಹೋರಾಡಲು, ಸಿರಿಯಾ, ಇರಾಕ್, ಅಫ್ಘಾನಿಸ್ತಾನ ದೇಶಗಳಿಗೆ ಸಾಗಿಸಲಾಗಿದೆ ಎಂಬ ಸಂಭಾಷಣೆ ಹಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ರಿಲೀಸ್ ಬಳಿಕವೂ ಪ್ರತಿಭಟನೆ ಮುಂದುವರಿದಿದೆ.

ಕೇರಳ ಸಿಎಂ ಪಿಣರಾಯಿ ವಿಜಯನ್ ಈ ಬಗ್ಗೆ ಪ್ರತಿಕ್ರಿಯಿಸಿ 'ಇದೊಂದು ಆರ್‌ಎಸ್ಎಎಸ್ ಪ್ರೇರಿತ, ಪ್ರಚಾರಕ್ಕಾಗಿ ಮಾಡಿರುವ ಸಿನಿಮಾ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇರಳದ ಕಾಂಗ್ರೆಸ್ ಮುಖಂಡರು ಕೆಲವೆಡೆ ಪ್ರತಿಭಟನೆ ನಡೆಸಿದ್ದರು. ಮತ್ತೊಂದೆಡೆ ತಮಿಳು ನಾಡಿನಲ್ಲಿ ಮಲ್ಟಿಪ್ಲೆಕ್ಸ್, ಥಿಯೇಟರ್ ಮಾಲೀಕರು ಸ್ವಯಂಪ್ರೇರಿತರಾಗಿ 'ದಿ ಕೇರಳ ಸ್ಟೋರಿ' ಪ್ರದರ್ಶನ ಸ್ಥಗಿತಗೊಳಿಸಿದ್ದಾರೆ. ರಾಜ್ಯಾದ್ಯಂತ 13 ಥಿಯೇಟರ್‌ಗಳಲ್ಲಿ ಮಾತ್ರ ಸಿನಿಮಾ ಪ್ರದರ್ಶಿಸಲಾಗುತ್ತಿದೆ. ಅದರ ನಡುವೆಯೇ ಮೇ 8ರಂದು ಪಶ್ಚಿಮ ಬಂಗಾಳದಲ್ಲಿ ಸಿನಿಮಾ ಬ್ಯಾನ್ ಮಾಡಲಾಗಿದೆ. 'ದ್ವೇಷಪೂರಿತ ಘಟನೆಗಳನ್ನು ತಡೆಯಲು, ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕಾ ಕ್ರಮವಾಗಿ ದಿ ಕೇರಳ ಸ್ಟೋರಿ ಸಿನಿಮಾಕ್ಕೆ ನಿರ್ಬಂಧ ವಿಧಿಸಲಾಗಿದೆ' ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿಕೊಂಡಿದ್ದಾರೆ.
ಇತ್ತೀಚೆಗಷ್ಟೆ ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ, 'ಭಯೋತ್ಪಾದಕರ ಪಿತೂರಿಗಳನ್ನು ಹೊರತರುವಲ್ಲಿ ಸಿನಿಮಾ ಯಶಸ್ವಿಯಾಗಿದೆ' ಎಂದು 'ದಿ ಕೇರಳ ಸ್ಟೋರಿ' ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಮಧ್ಯಪ್ರದೇಶ ಸರ್ಕಾರ, ಈ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿದೆ. ತೆರಿಗೆ ವಿನಾಯಿತಿ ಬಗ್ಗೆ ಉತ್ತರಪ್ರದೇಶ ಸರ್ಕಾರ ರ್ಚಚಿಸುತ್ತಿದೆ. ಜತೆಗೆ ಹಲವು ಕಲಾವಿದರು ಸಿನಿಮಾಕ್ಕೆ ಬೆಂಬಲ ನೀಡಿದ್ದಾರೆ. ಭಾರತೀಯ ಟಿವಿ ಮತ್ತು ಸಿನಿಮಾ ನಿರ್ದೇಶಕರ ಸಂಘ ಸಹ ಪಶ್ಚಿಮ ಬಂಗಾಳ ಸರ್ಕಾರದ ಕ್ರಮವನ್ನು ವಿರೋಧಿಸಿದೆ. ಸಂಸದ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಈ ಸಿನಿಮಾವನ್ನು ಮೇ 1ರಂದು ಕಾಲೇಜು ವಿದ್ಯಾರ್ಥಿನಿಯರಿಗೆ ವಿಶೇಷ ಪ್ರದರ್ಶನ ಆಯೋಜಿಸಿದ್ದರು.

ಈ ಸಿನಿಮಾ ರಿಲೀಸ್‌ಗೂ ಬಾಯ್ಕಾಟ್ ಗೆ ಗುರಿಯಾಗಿತ್ತು. ಅಲ್ಲದೆ ಹಲವರು ಈ ಸಿನಿಮಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಯಾವುದಕ್ಕೂ ಜಗ್ಗದ ದಿ ಕೇರಳ ಸ್ಟೋರಿ ಮೇ 5ರಂದು ರಿಲೀಸ್ ಆಗಿದ್ದು, ಮೂರು ದಿನಗಳಲ್ಲಿ 35 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿಕೊಂಡಿದೆ. ಮೊದಲ ದಿನ 8 ಕೋಟಿ ರೂ., 2ನೇ ದಿನ 11 ಕೋಟಿ ರೂ.. ಹಾಗೂ ಮೂರನೇ ದಿನ 16 ಕೋಟಿ ರೂ. ಕಲೆಕ್ಷನ್ ಮಾಡಿಕೊಂಡಿರುವ ಚಿತ್ರ 50 ಕೋಟಿ ರೂ. ಗಳಿಕೆಯತ್ತ ಮುನ್ನುಗ್ಗುತ್ತಿದೆ.

Related Posts

Ads on article

Advertise in articles 1

advertising articles 2

Advertise under the article