-->
ಅತೀದೊಡ್ಡ ಸೈಬರ್ ವಂಚನೆ ಪ್ರಕರಣ ದಾಖಲು: ವೈದ್ಯೆಗೆ 4.47 ಕೋಟಿ ರೂ. ಪಂಗನಾಮ

ಅತೀದೊಡ್ಡ ಸೈಬರ್ ವಂಚನೆ ಪ್ರಕರಣ ದಾಖಲು: ವೈದ್ಯೆಗೆ 4.47 ಕೋಟಿ ರೂ. ಪಂಗನಾಮ


ಹೊಸದಿಲ್ಲಿ: ದೆಹಲಿಯಲ್ಲಿ ಇದುವರೆಗಿನ ಅತಿ ದೊಡ್ಡಮಟ್ಟದ ಸೈಬರ್ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಹಾರಾಷ್ಟ್ರ ಮಾದಕವಸ್ತು ವಿಭಾಗದ ಅಧಿಕಾರಿಗಳೆಂದು ಹೇಳಿಕೊಂಡ ವಂಚಕರ ತಂಡವೊಂದು ವೈದ್ಯೆಯೊಬ್ಬರ ಉಳಿತಾಯದಿಂದ 4.47 ಕೋಟಿ ರೂ. ಲಪಟಾಯಿಸಿದ್ದಾರೆ.

ವೈದ್ಯೆಗೆ ಬಂದಿದ್ದ ಫೆಡ್‌ಎಕ್ಸ್ ಕೊರಿಯರ್ ಪ್ಯಾಕ್‌ನಲ್ಲಿ ಬೃಹತ್ ಪ್ರಮಾಣದ ಮಾದಕ ವಸ್ತು 'ಎಂಡಿಎಂಎ' ಪತ್ತೆಯಾಗಿದೆ. ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು 34 ವರ್ಷದ ವೈದ್ಯೆಗೆ ವಂಚಿಸಿ ಹಣ ವಸೂಲಿ ಮಾಡಲಾಗಿದೆ. ಮಾದಕ ವಸ್ತುಗಳ ಮಾರಾಟದಿಂದ ಬಂದಿರುವ ಹಣವನ್ನು ತಾವು ಸ್ವೀಕರಿಸಿದ್ದೀರಿ ಎಂದು ವಂಚಕರು ಆಪಾದಿಸಿದ್ದಾರೆ. ಬಳಿಕ ವೈದ್ಯೆಯ ಖಾತೆಯ ಹಣವನ್ನು ತಮ್ಮ ಖಾತೆಗೆ ಹಸ್ತಾಂತರಿಸುವಂತೆ ಬಲವಂತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಸ್ಕೈಪ್ ಕರೆಯ ಮೂಲಕ ವೈದ್ಯೆಯನ್ನು ಸಂಪರ್ಕಿಸಿರುವ ವಂಚಕರು ಅಂಧೇರಿ ಪೊಲೀಸ್ ಠಾಣೆಯ ಅಧಿಕಾರಿಗಳು, ಆರ್‌ಬಿಐ ಅಧಿಕಾರಿಗಳು, ಮುಂಬೈ ಪೊಲೀಸ್ ಡಿಸಿಪಿ, ಕಸ್ಟಮ್ಸ್ ಅಧಿಕಾರಿಗಳು ಹಾಗೂ ಮಾದಕ ವಸ್ತು ವಿಭಾಗದ ಪೊಲೀಸರು ಎಂದು ನಂಬಿಸಿ ವಂಚನೆ ಜಾಲಕ್ಕೆ ಬೀಳಿಸಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ಪ್ರಕರಣದ ತಾಂತ್ರಿಕ ವಿಚಾರಣೆ ಆರಂಭಿಸಿದ್ದಾರೆ.

ಮುಂಬೈನಿಂದ ತೈವಾನ್‌ಗೆ ಈ ಪಾರ್ಸೆಲ್ ಅನ್ನು 2023ರ ಏಪ್ರಿಲ್ 21ರಂದು ಬುಕ್ ಮಾಡಲಾಗಿದೆ. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ರೂ. 25,025 ರೂ. ಶುಲ್ಕ ಹಾಗೂ ಜಿಎಸ್‌ಟಿ ಪಾವತಿಸಲಾಗಿದೆ ಎಂದು ವೈದ್ಯೆಗೆ ಮಾಹಿತಿ ನೀಡಲಾಗಿದೆ. ಇದನ್ನು ಆಕೆ ನಿರಾಕರಿಸಿದಾಗ, ಅಂಧೇರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸುವಂತೆ ಸೂಚಿಸಿದ್ದಾರೆ. ಅಂಧೇರಿ ಠಾಣೆಯ ಇನ್‌ಸ್ಪೆಕ್ಟರ್ ಸ್ಮಿತಾ ಪಾಟೀಲ್ ಅವರನ್ನು ಸಂಪರ್ಕಿಸಿ ಆನ್‌ಲೈನ್ ಪ್ರಕರಣ ದಾಖಲಿಸುವಂತೆ ಸಲಹೆ ಮಾಡಿದ್ದಾರೆ. ಇದಕ್ಕಾಗಿ ಸ್ಕೈಪ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಂತೆ ಸೂಚಿಸಿದ್ದಾರೆ.

ಸ್ಮಿತಾ ಪಾಟೀಲ್ ಎಂಬ ಪರಿಚಯಿಸಿಕೊಂಡ ಮಹಿಳೆ ಆ ಬಳಿಕ ಸ್ಕೈಪ್‌ನಲ್ಲಿ ಸಂಪರ್ಕಿಸಿ, ಹೇಳಿಕೆಯನ್ನು ದಾಖಲಿಸುವಂತೆ ಸೂಚಿಸಿದ್ದಾಳೆ. ವೈದ್ಯೆಯ ಆಧಾರ್ ಐಡಿಯನ್ನು ದಾಖಲೆಯಾಗಿ ನೀಡಿ 23 ಬ್ಯಾಂಕ್ ಖಾತೆ ತೆರೆಯಲಾಗಿದೆ ಎಂದು ನಂಬಿಸಿದ್ದಾರೆ. ಜತೆಗೆ ಪ್ರಕರಣದಲ್ಲಿ ನಿಮ್ಮನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ವೈದ್ಯೆಯ ಎಲ್ಲ ಬ್ಯಾಂಕ್ ಖಾತೆಗಳ ಸ್ಟೀನ್‌ಶಾಟ್ ಪಡೆದು ಹಂತ ಹಂತವಾಗಿ ಖಾತೆಯಿಂದ ಹಣ ತೆಗೆದಿದ್ದಾರೆ.

Ads on article

Advertise in articles 1

advertising articles 2

Advertise under the article