ಕಾಸರಗೋಡು: 70ಲಕ್ಷ ರೂ. ಬಂಪರ್ ಮೊತ್ತ ಒಲಿದು ಬಂದರೂ ಇನ್ನೂ ಪತ್ತೆಯಾಗಿಲ್ಲ ಅದೃಷ್ಟಶಾಲಿ
Thursday, May 18, 2023
ಕಾಸರಗೋಡು: ಲಾಟರಿ ಖರೀದಿ ಗೀಳು ಅದೆಷ್ಟೋ ಮಂದಿಯ ಜೀವನವನ್ನೇ ಹಾಳು ಮಾಡಿದೆ. ಅದೇ ಲಾಟರಿ ಅದೃಷ್ಟ ತಂದು ಕೆಲವರ ಜೀವನವನ್ನೇ ಬದಲಾಯಿಸಿದೆ. ಆದರೆ ಇಲ್ಲೊಬ್ಬನಿಗೆ 70 ಲಕ್ಷ ರೂ. ಬಂಪರ್ ಲಾಟರಿ ಹೊಡೆದಿದೆ. ಆದರೆ ಇಷ್ಟೊಂದು ಮೊತ್ತದ ಬಹುಮಾನ ಒಲಿದು ಬಂದರೂ ಲಾಟರಿ ವಿಜೇತ ಅದೃಷ್ಟಶಾಲಿ ವ್ಯಕ್ತಿ ಯಾರು ಎಂದು ಇನ್ನೂ ತಿಳಿದುಬಂದಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿಯಲ್ಲಿರುವ ಅಮಲ್ ಕನಕದಾಸರಿಗೆ ಸೇರಿದ ಜಯಮ್ಮ ಲಾಟರಿ ಏಜೆನ್ಸಿಯಲ್ಲಿ ಮೇ 7ರಂದು ಈ ಲಾಟರಿ ಮಾರಾಟವಾಗಿತ್ತು. ಕೇರಳ ರಾಜ್ಯದ ಅಕ್ಷಯ ಲಾಟರಿ ಟಿಕೆಟ್ (ನಂಬರ್: ಎ.ಟಿ. 317545) ಇದಾಗಿದೆ. ಇದೀಗ ಲಾಟರಿಯ ಬಂಪರ್ ಮೊತ್ತವನ್ನು ಬಹುಮಾನವಾಗಿ ಗಳಿಸಿದ ವ್ಯಕ್ತಿ ಇನ್ನೂ ಪತಗತೆಯಾಗಿಲ್ಲ. ಈ ಟಿಕೆಟ್ ಖರೀದಿಸಿದ ವ್ಯಕ್ತಿ ಈವರೆಗೆ ಲಾಟರಿ ಏಜೆನ್ಸಿಯನ್ನೂ ಸಂಪರ್ಕಿಸಿಲ್ಲ. ಆದ್ದರಿಂದ ಏಜೆನ್ಸಿಯವರು ಬಂಪರ್ ಬಹುಮಾನ ವಿಜೇತನಿಗಾಗಿ ಕಾಯುತ್ತಿದ್ದಾರೆ.