ಮಗುವಿನ ನಿರೀಕ್ಷೆಯಲ್ಲಿ 83ವರ್ಷದ ನಟ, ಸಂಗಾತಿ 29ವರ್ಷದ ಯುವತಿ
Wednesday, May 31, 2023
ದೆಹಲಿ: ಸಿನಿಮಾಗಳಲಲ್ಲಿ ಏನೆನೋ ವಿಚಿತ್ರ ಕಥೆಗಳನ್ನು, ಅದ್ಭುತ ಸನ್ನಿವೇಶಗಳನ್ನು ನಾವು ನೋಡುತ್ತಿರುತ್ತೇವೆ. ಆದರೆ ಅವೆಲ್ಲವೂ ಕಾಲ್ಪನಿಕ ಅಥವಾ ಗ್ರಾಫಿಕ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇಂತಹ ವಿಚಿತ್ರವೊಂದು ನಿಜವಾಗಿ ಬಿಟ್ಟರೇ? ಹೌದು, ಹಾಲಿವುಡ್ ನಟನೊಬ್ಬ ತನ್ನ 82ನೇ ವಯಸ್ಸಿನಲ್ಲಿ ತಂದೆಯಾಗುತ್ತಿದ್ದಾರೆ. ವಿಚಿತ್ರವೆಂದರೆ ಅವರ ಸಂಗಾತಿ 29 ವರ್ಷದ ಯುವತಿ.
ಹೌದು ಹಾಲಿವುಡ್‌ನ ದಿಗ್ಗಜ ನಟ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ಅಲ್ ಪಸಿನೋ ತಮ್ಮ 82ನೆ ವಯಸ್ಸಿನಲ್ಲಿ ತಂದೆಯಾಗಲಿದ್ದಾರೆ. 29 ವರ್ಷದ ಸಿನಿಮಾ ನಿರ್ಮಾಪಕಿ ನೂರ್ ಅಲ್ಫಲ್ಲಾಹ್ ರೊಂದಿಗೆ ಕಳೆದ ಒಂದು ವರ್ಷದಿಂದ ಡೇಟಿಂಗ್ ನಲ್ಲಿದ್ದ ಅಲ್ ಪಸಿನೋ ಇದೀಗ ಮಗುವಿನ ನಿರೀಕ್ಷೆಯಲ್ಲಿದ್ದಾರೆಂದು ವಿದೇಶಿ ಪತ್ರಿಕೆಯೊಂದು ವರದಿ ಮಾಡಿದೆ.
ಅಲ್ ಪಸಿನೋ ಈಗಾಗಲೇ ಮೂರು ಮಕ್ಕಳ ತಂದೆಯಾಗಿದ್ದಾರೆ. ಆದರೆ ನೂರ್ ಜೊತೆಗೆ ಕಳೆದ ಒಂದು ವರ್ಷದಿಂದ ಡೇಟಿಂಗ್ ಮಾಡುತ್ತಿದ್ದಾರೆ. ಕಳೆದ ತಿಂಗಳು, ಅಲ್ ಪಸಿನೊ ಅವರ ಸಹ ನಟ ರಾಬರ್ಟ್ ಡಿ ನಿರೋ ತಮ್ಮ 79ನೇ ವಯಸ್ಸಿನಲ್ಲಿ ಗೆಳತಿ ಟಿಫಾನಿ ಚೆನ್‌ರೊಂದಿಗೆ ಏಳನೇ ಮಗುವನ್ನು ಸ್ವಾಗತಿಸಿದ್ದರು.