![85ರ ವೃದ್ಧನ ಆರೈಕೆಗೆಂದು ವಾರದ ಹಿಂದೆ ಬಂದಿದ್ದವನು ಕೊಲೆಗೈದು ಪರಾರಿ 85ರ ವೃದ್ಧನ ಆರೈಕೆಗೆಂದು ವಾರದ ಹಿಂದೆ ಬಂದಿದ್ದವನು ಕೊಲೆಗೈದು ಪರಾರಿ](https://blogger.googleusercontent.com/img/b/R29vZ2xl/AVvXsEhVEtmP3EG5p_3BjzhHMTM0eKa2P-ije_67kudkwtDsm0wDUqvlSm0Q4DTmdJHJ8HYofF4WKNH_v5m13wNokFBMePlxIqTJn-WzwyoAhxyBpKE3sTpjbK-bdLz4M2Tm8INAX7ltTdfzL3v7/s1600/1683562102637495-0.png)
85ರ ವೃದ್ಧನ ಆರೈಕೆಗೆಂದು ವಾರದ ಹಿಂದೆ ಬಂದಿದ್ದವನು ಕೊಲೆಗೈದು ಪರಾರಿ
Monday, May 8, 2023
ಮುಂಬೈ: ಎಂಬತ್ತೈದರ ವೃದ್ಧರೊಬ್ಬರ ಆರೈಕೆಗೆಂದು ವಾರದ ಹಿಂದೆ ಬಂದಿದ್ದವನೇ ಅವರನ್ನು ಕೊಲೆಗೈದು ಪರಾರಿಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಇದೀಗ ಆರೋಪಿಗಾಗಿ ವ್ಯಾಪಕ ಶೋಧ ಆರಂಭವಾಗಿದೆ.
ಮುಂಬೈನ ಸಾಂತಾಕ್ರೂಜ್‌ನಲ್ಲಿನ 85 ವರ್ಷದ ಪುರುಷೋತ್ತಮ್ ನಾಯ್ಕ ಕೊಲೆಗೀಡಾದ ವ್ಯಕ್ತಿ.
ಈ ವ್ಯಕ್ತಿ ತಮ್ಮ ಪತ್ನಿ ಹಾಗೂ 30 ವರ್ಷದ ಕೆಲಸದವನೊಂದಿಗೆ ತಮ್ಮ ಮನೆಯಲ್ಲಿದ್ದರು. ಆದರೆ ಪುರುಷೋತ್ತಮ್ ನಾಯ್ಕ ಅವರ ಕೈ-ಕಾಲುಗಳನ್ನು ಕಟ್ಟಿ ಹಾಕಿ ಉಸಿರುಗಟ್ಟಿಸಿ ಸಾಯಿಸಲಾಗಿದೆ. ಕೊಲೆ ಮಾಡಲು ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದೀಗ ಮನೆಗೆಲಸದ ವ್ಯಕ್ತಿ ಕೃಷ್ಣ ಮನ್‌ಬಹದ್ದೂರ್ ಪೆರಿಯಾರ್ ಎಂಬಾತ ಪರಾರಿಯಾಗಿ ತಲೆಮರೆಸಿಕೊಂಡಿದ್ದಾನೆ. ಆರೋಪಿ 8 ದಿನಗಳಿಂದ ನಾಯ್ಕ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಎಂಬುದು ಪೊಲೀಸ್ ವಿಚಾರಣೆ ವೇಳೆ ತಿಳಿದುಬಂದಿದೆ.