-->
ಕ್ರೀಡೆ, ಸಂಸ್ಕೃತಿಯ ಬ್ರ್ಯಾಂಡ್ ಆಳ್ವಾಸ್: ಮೂಡಬಿದಿರೆ ಆಳ್ವಾಸ್ ಕ್ರೀಡಾಕೂಟದಲ್ಲಿ ಶ್ರೀಮಾ ಪ್ರಿಯದರ್ಶಿನಿ

ಕ್ರೀಡೆ, ಸಂಸ್ಕೃತಿಯ ಬ್ರ್ಯಾಂಡ್ ಆಳ್ವಾಸ್: ಮೂಡಬಿದಿರೆ ಆಳ್ವಾಸ್ ಕ್ರೀಡಾಕೂಟದಲ್ಲಿ ಶ್ರೀಮಾ ಪ್ರಿಯದರ್ಶಿನಿ

ಕ್ರೀಡೆ, ಸಂಸ್ಕೃತಿಯ ಬ್ರ್ಯಾಂಡ್ ಆಳ್ವಾಸ್: ಮೂಡಬಿದಿರೆ ಆಳ್ವಾಸ್ ಕ್ರೀಡಾಕೂಟದಲ್ಲಿ ಶ್ರೀಮಾ ಪ್ರಿಯದರ್ಶಿನಿ





"ಕ್ರೀಡೆ, ಸಂಸ್ಕೃತಿ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳ ಮಹಾನ್ ಸಾಧನೆಗಳಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆ ಬ್ರ್ಯಾಂಡ್ ಆಗಿ ಹೊರ ಹೊಮ್ಮುತ್ತಿದೆ ಎಂದು ಅಂತಾರಾಷ್ಟ್ರೀಯ ಕ್ರೀಡಾಪಟು ಶ್ರೀಮಾ ಪ್ರಿಯದರ್ಶಿನಿ ಶ್ಲಾಘಿಸಿದರು.


ಮೂಡಬಿದಿರೆಯ ಸ್ವರಾಜ್ ಮೈದಾನದ ಕ್ರೀಡಾಂಗಣದಲ್ಲಿ ನಡೆದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶಿಕ್ಷಣ ಸಂಸ್ಥೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.


\ದಿನಂಪ್ರತಿ ಪತ್ರಿಕೆಗಳು, ಮಾಧ್ಯಮಗಳನ್ನು ನೋಡುವಾಗ, ಅಲ್ಲಿ ಕರಾವಳಿಯ ‘ಆಳ್ವಾಸ್’ ಸಾಧನೆಯ ಹೆಸರು ಇದ್ದೇ ಇರುತ್ತದೆ. ಆಳ್ವಾಸ್‌ ಸಂಸ್ಥೆಯ ಕ್ರೀಡಾಪಟುಗಳು ಸಾಧನೆ ಮಾಡಿದ್ದಾರೆ. ಶಿಕ್ಷಣ ಸಂಸ್ಥೆಯ ಸಾಧನೆ ಸರ್ವವ್ಯಾಪಿಯಾಗಿದೆ’ ಎಂದು ಶ್ರೀಮಾ ಸಂತಸ ವ್ಯಕ್ತಪಡಿಸಿದರು.


ಕ್ರೀಡೆ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಶಿಸ್ತು ಬಹುಮುಖ್ಯ. ಕ್ರೀಡೆಯಲ್ಲಿ ಸೋಲು ಎಂಬುವುದೇ ಇಲ್ಲ. ಇಲ್ಲಿ ಗೆಲುವು ಮತ್ತು ಕಲಿಕೆ ಮಾತ್ರ. ಕ್ರೀಡಾಳುಗಳಲ್ಲಿ ಕ್ರೀಡಾ ಸ್ಫೂರ್ತಿ ಎಂಬುದು ಇದ್ದಾಗ ಅಲ್ಲಿ ಸೋಲಿನ ಆತಂಕ ಕೂಡ ಬಾಧಿಸುವುದಿಲ್ಲ’ ಎಂದರು.


ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ದಕ್ಷಿಣ ಕನ್ನಡ ಸಹಾಯಕ ನಿರ್ದೇಶಕ ರವಿ ವೈ. ನಾಯಕ್ ಧ್ವಜಾರೋಹಣವನ್ನು ನೆರವೇರಿಸಿದರು. ಬಳಿಕ ಕ್ರೀಡಾಪಟುಗಳಿಂದ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಆಳ್ವಾಸ್ ಸಮೂಹ ಸಂಸ್ಥೆ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.


26 ತಂಡಗಳಲ್ಲಿ 8 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಪಾಲ್ಗೊಂಡರು. ಚೆಂಡೆ, ಡೊಳ್ಳು ಹಾಗೂ ಬ್ಯಾಂಡ್ ತಂಡಗಳು ಮೆರುಗು ನೀಡಿದವು.


ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಕ್ರೀಡಾಳುಗಳು ಸಕ್ರಿಯರಾಗಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಆತ್ಮಾವಲೋಕನ ಹಾಗೂ ಪ್ರತಿಭೆ ಗುರುತಿಸಲು ಸಹಕಾರಿ ಎಂದರು.


ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಶ್ರೇಯಸ್ ಭಟ್, ಉದ್ಯಮಿ ಶ್ರೀಪತಿ ಭಟ್ ಹಾಗೂ ಸಂಸ್ಥೆಯ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



ಮಂಗಳೂರು ವಿಶ್ವವಿದ್ಯಾಲಯ ವಿಭಾಗದಲ್ಲಿ ಬಿ.ಕಾಂ, ತಂಡ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ವಿಭಾಗದಲ್ಲಿ MLT ತಂಡ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಾಗದಲ್ಲಿ MBA ತಂಡಗಳು ಸಮಗ್ರ ಪ್ರಶಸ್ತಿಯ ಗೌರವಕ್ಕೆ ಪಾತ್ರವಾಯಿತು.

.

Ads on article

Advertise in articles 1

advertising articles 2

Advertise under the article