ಕರಾವಳಿ ಬಿಜೆಪಿಯಲ್ಲಿ ನಳಿನ್ ಈಗ ಟಾರ್ಗೆಟ್: ಸ್ಪರ್ಧಿಸಿದರೆ ಸೋಲು ಖಚಿತ!?
ಕರಾವಳಿ ಬಿಜೆಪಿಯಲ್ಲಿ ನಳಿನ್ ಈಗ ಟಾರ್ಗೆಟ್: ಸ್ಪರ್ಧಿಸಿದರೆ ಸೋಲು ಖಚಿತ!?
ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಬಂಡಾಯದ ಕಿಡಿ ಈಗ ದೊಡ್ಡ ಮಟ್ಟದಲ್ಲಿ ಉರಿಯಲು ಆರಂಭಿಸಿದೆ. ಫಲಿತಾಂಶದ ಬೆನ್ನಲ್ಲೇ ಬ್ಯಾನರ್‌ಗೆ ಹಾರ ಹಾಕಿದ ಪ್ರಕರಣ ಮತ್ತು ಪುತ್ತೂರು ಪೊಲೀಸರಿಂದ ಪುತ್ತಿಲ ಬೆಂಬಲಿಗರ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣಗಳು ಈ ವೈಷಮ್ಯವನ್ನು ಮತ್ತಷ್ಟು ವಿಸ್ತಾರಗೊಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಜಾಗರಣ ವೇದಿಕೆ ಮತ್ತು ಬಜರಂಗ ದಳ ಹಾಗೂ ಇತರ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಕೆಲವು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಳಿನ್ ಮಂಗಳೂರಿನಲ್ಲಿ ಸ್ಪರ್ಧಿಸಿದರೆ ಸೋಲಿಸುವುದು ಶತಸ್ಸಿದ್ಧ ಎಂದು ಈ ಗುಂಪಿನ ಪ್ರಬಲ ನಾಯಕರು ನಳಿನ್‌ಗೆ ಪಂಥಾಹ್ವಾನ ಮಾಡಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ವೇಳೆ ಹಿಂದುತ್ವವಾದಿ ಕಾರ್ಯಕರ್ತರ ಒಳಬೇಗುದಿ, ನಾಯಕರ ವಿರುದ್ಧದ ಆಕ್ರೋಶ ಮೊದಲ ಬಾರಿಗೆ ಸ್ಫೋಟಗೊಂಡಿತ್ತು. ವಿಧಾನಸಭಾ ಚುನಾವಣೆಯಲ್ಲಿ ಅದು ಹೊತ್ತಿ ಉರಿಯಿತು.
ಅರುಣ್ ಪುತ್ತಿಲ ಅವರಿಗೆ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಪುತ್ತಿಲ ಕೇವಲ ನಾಲ್ಕು ಸಾವಿರ ಮತಗಳಿಗೆ ಸೋಲು ಕಂಡರು. ಮಾತ್ರವಲ್ಲದೆ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ದೂಡಿದರು.
ಸ್ವಂತ ಊರಿನಲ್ಲೇ ನಳಿನ್ ಇಷ್ಟೊಂದು ದೊಡ್ಡ ಮಟ್ಟದಲ್ಲಿ ವಿರೋಧ ಎದುರಿಸಿದ್ದು, ಪಕ್ಷ ಮತ್ತು ಸಂಘಟನೆಯ ಇತಿಹಾಸದಲ್ಲೆ ಇದು ಮೊದಲು. ಒಟ್ಟಿನಲ್ಲಿ ನಳಿನ್ ಕುಮಾರ್ ಕಟೀಲ್‌ಗೆ ಈ ಬೆಳವಣಿಗೆಗಳು ಹೊಸ ಹೊಸ ಸಂಕಷ್ಟ ಮತ್ತು ತಲೆನೋವು ತಂದಿರುವುದು ಮಾತ್ರ ನಿಜ.