ಎರಡನೇ ಪತ್ನಿಯನ್ನು ಮಕ್ಕಳೆದುರೇ ಉಸಿರುಗಟ್ಟಿಸಿ ಕೊಲೆಗೈದ ಪಾಪಿ ಪತಿ ಅರೆಸ್ಟ್
Sunday, May 28, 2023
ಬೆಂಗಳೂರು:ಎರಡನೆ ಪತ್ನಿಯನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿ ಪತಿಯನ್ನು ಬೆಂಗಳೂರು ಸೂರ್ಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನೇಪಾಳ ಮೂಲದ ಅಮರ್ ಬಂಧಿತ ಆರೋಪಿ.
ಎ.23ರ ಬೆಳಗ್ಗೆ ಆರೋಪಿ ಅಮರ್ ತನ್ನ ಎರಡನೆ ಪತ್ನಿ ನಿಶು(19) ಎಂಬಾಕೆಯ ಕುತ್ತಿಗೆಯನ್ನು ವೈರ್ ನಿಂದ ಬಿಗಿದು ಕೊಲೆಗೈದಿದ್ದಾನೆ. ಆತ ತನ್ನಿಬ್ಬರ ಮಕ್ಕಳ ಮುಂದೆಯೇ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಆ ಬಳಿಕ ಅತ್ತೆಯ ಮನೆಯಲ್ಲಿ ಇಬ್ಬರು ಮಕ್ಕಳನ್ನು ಬಿಟ್ಟು ಪರಾರಿಯಾಗಿದ್ದ ಎನ್ನಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ಕಾರ್ಯಾಚರಣೆ ಕೈಗೊಂಡು ಅಮರ್‌ನನ್ನು ಬಂಧಿಸಿದ್ದಾರೆ.