![ಕೊಣಾಜೆ: ಪುತ್ರಿಯ ದಿನವೇ ಹೃದಯಾಘಾತದಿಂದ ತಂದೆ ದಾರುಣ ಸಾವು ಕೊಣಾಜೆ: ಪುತ್ರಿಯ ದಿನವೇ ಹೃದಯಾಘಾತದಿಂದ ತಂದೆ ದಾರುಣ ಸಾವು](https://blogger.googleusercontent.com/img/b/R29vZ2xl/AVvXsEgwdKaOxwI7IwDUfJ-co9yjSxT9ojlP5DIZi_eBg4TYY3Yi0yeAIT6qNmKrZ6jrXNuNzawRZnsV-jJooiKpIYX7v4gQIdtLPOtPH97_t6hXs0w3np8j0netWvnSxu_NxTQTRuE9NwZ75IMb/s1600/1684165942822127-0.png)
ಕೊಣಾಜೆ: ಪುತ್ರಿಯ ದಿನವೇ ಹೃದಯಾಘಾತದಿಂದ ತಂದೆ ದಾರುಣ ಸಾವು
Monday, May 15, 2023
ಕೊಣಾಜೆ: ಪುತ್ರಿಯ ವಿವಾಹದ ದಿನವೇ ತಂದೆ ಹೃದಯಾಘಾತದಿಂದ ಮೃತಪಟ್ಟ ಹೃದಯವಿದ್ರಾವಕ ಘಟನೆ ಬೋಳಿಯಾರ್ ಕುಚುಗುಡ್ಡೆಯಲ್ಲಿ ಸೋಮವಾರ ಸಂಭವಿಸಿದೆ.
ಬೋಳಿಯಾರ್ ಕುಚುಗುಡ್ಡೆಯ ಹಸನಬ್ಬ (60) ಮೃತಪಟ್ಟ ವ್ಯಕ್ತಿ.
ಬೀಡಿ ಕಾಂಟ್ರಾಕ್ಟ್ ದಾರರಾಗಿದ್ದ ಹಸನಬ್ಬ ಅವರು ತಮ್ಮ ಪುತ್ರಿಗೆ ಕಾಸರಗೋಡಿನ ಯುವಕನೊಂದಿಗೆ ಸೋಮವಾರ ಹೊಸಂಗಡಿಯ ಗ್ರ್ಯಾಂಡ್ ಆಡಿಟೋರಿಯಂನಲ್ಲಿ ಮದುವೆ ನಿಗದಿ ಮಾಡಿದ್ದರು. ಆದರೆ ಹಸನಬ್ಬರಿಗೆ ಸೋಮವಾರ ಮುಂಜಾನೆ 4 ಗಂಟೆಯ ವೇಳೆಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು ಆದರೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ವಧುವಿನ ತಂದೆ ನಿಧನರಾಗಿರುವ ಹಿನ್ನೆಲೆಯಲ್ಲಿ ಹೊಸಂಗಡಿಯಲ್ಲಿ ನಡೆಯಬೇಕಿದ್ದ ಮದುವೆ ಸಮಾರಂಭವನ್ನು ರದ್ದುಗೊಳಿಸಲಾಗಿದೆ. ಬಳಿಕ ಎರಡು ಕುಟುಂಬದ ಹಿರಿಯರೊಂದಿಗೆ ಚರ್ಚಿಸಿ ಸಂಜೆಯ ವೇಳೆಗೆ ವರನ ಮನೆಯಲ್ಲಿ ನಿಖಾಹ್ ನೆರವೇರಿದೆ ಎಂದು ತಿಳಿದು ಬಂದಿದೆ. ಮೃತರು ಇಬ್ಬರು ಪುತ್ರರು, ನಾಲ್ಕು ಪುತ್ರಿಯರನ್ನು ಅಗಲಿದ್ದಾರೆ. ಇಂದು ಕೊನೆಯ ಪುತ್ರಿಯ ವಿವಾಹ ಸಮಾರಂಭವಿತ್ತು.