ಮರಕ್ಕೆ ಡಿಕ್ಕಿ ಹೊಡೆದು ಮಗುಚಿಬಿದ್ದ ಆ್ಯಂಬುಲೆನ್ಸ್: ರೋಗಿ ಸೇರಿದಂತೆ ಮೂವರು ಸ್ಥಳದಲ್ಲಿಯೇ ಮೃತ್ಯು
Thursday, May 4, 2023
ತ್ರಿಶ್ಶೂರ್: ಕೇರಳದ ತ್ರಿಶ್ಶೂರ್ ಜಿಲ್ಲೆಯ ಪಂಥಾಲೂರ್ ಎಂಬಲ್ಲಿ ಮರವೊಂದಕ್ಕೆ ಡಿಕ್ಕಿ ಹೊಡೆದ ಆಂಬ್ಯುಲೆನ್ಸ್ ಪಲ್ಟಿಯಾಗಿ ರೋಗಿ ಸೇರಿದಂತೆ ಮೂವರು ದುರಂತವಾಗಿ ಅಂತ್ಯಗೊಂಡ ಘಟನೆ ನಡೆದಿದೆ. ಆಂಬ್ಯುಲೆನ್ಸ್‌ನಲ್ಲಿದ್ದ ಇತರ ಮೂವರು ಗಾಯಗೊಂಡಿದ್ದಾರೆ.
ರೋಗಿ ಫೆಮಿನಾ (20) ಆಕೆಯ ಪತಿ ಅಬಿದ್ (35) ಹಾಗೂ ಸಂಬಂಧಿ ರಹಮತ್ (48) ಪ್ರಾಣ ಕಳೆದುಕೊಂಡವರು. ಆಂಬ್ಯುಲೆನ್ಸ್ ಚಾಲಕ ಶುಹೈಬ್ (29), ಫಾರಿಸ್ (20) ಮತ್ತು ಸಾದಿಕ್ (21) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಫೆಮಿನಾ ಎಂಬವರನ್ನು ಆಸ್ಪತ್ರೆಗೆ ಕರೆದೊಯ್ಯುಲಾಗುತ್ತಿತ್ತು. ಈ ವೇಳೆ ಆ್ಯಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಫೆಮಿನಾ ಪತಿ ಅಬಿದ್ ಮತ್ತು ಸಂಬಂಧಿ ರಹಮತ್ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಆಂಬ್ಯುಲೆನ್ಸ್‌ನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣವಾಯಿತು.