ಮಂಗಳೂರು: ಕೋಟ್ಯಂತರ ಮೌಲ್ಯದ ವಜ್ರದ ಹರಳು ದುಬೈಗೆ ಕಳ್ಳ ಸಾಗಾಟ - ಮಂಗಳೂರು ಏರ್ಪೋರ್ಟ್ ನಲ್ಲಿ ಆರೋಪಿ ವಶಕ್ಕೆ
Sunday, May 28, 2023
ಮಂಗಳೂರು: ಕೋಟ್ಯಂತರ ರೂ. ಮೌಲ್ಯದ ವಜ್ರದ ಹರಳುಗಳನ್ನು ದುಬೈಗೆ ಕಳ್ಳಸಾಗಣೆಗೆತ್ನಿಸಿದ ಆರೋಪಿಯೊಬ್ಬನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ.
ದುಬೈಗೆ ತೆರಳಲೆಂದು ಬಜ್ಪೆಯ ಅಂತಾರಾಷ್ಟ್ರೀಯ ವಿಮಾನದೊಳಗೆ ಕೇರಳದ ಕಾಸರಗೋಡು ನಿವಾಸಿ ತೆರಳುತ್ತಿದ್ದ. ಈತನ ಬಗ್ಗೆ ಅನುಮಾನಗೊಂಡು ಸಿಐಎಸ್‌ಎಫ್ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಆತನ ಒಳ ಉಡುಪಿನಲ್ಲಿ ಎರಡು ಪ್ಯಾಕೆಟ್ ಗಳಲ್ಲಿ ಬಚ್ಚಿಟ್ಟಿದ್ದ ವಜ್ರದ ಹರಳುಗಳು ಪತ್ತೆಯಾಗಿದೆ.
ಈ ಎರಡು ಪ್ಯಾಕೆಟ್ ನೊಳಗಡೆ ಮತ್ತೆ 13 ಸಣ್ಣ ಪ್ಯಾಕೆಟ್ ಗಳಲ್ಲಿ ಅಡಗಿಸಿಟ್ಟಿದ್ದ 306.21 ಕ್ಯಾರೆಟ್ ವಜ್ರದ ಹರಳುಗಳು ಪತ್ತೆಯಾಗಿದೆ. ಇವುಗಳ ಒಟ್ಟು ಮೌಲ್ಯ 1.69 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ತಕ್ಷಣ ಆತನನ್ನು ಸಿಐಎಸ್‌ಎಫ್ ಅಧಿಕಾರಿಗಳು ವಶಕ್ಕೆ ಪಡೆದು ಕಸ್ಟಮ್ಸ್ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಇದೀಗ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.