-->
ನಕಲಿ‌ ಕರೆಗಳನ್ನು ತಡೆಯಲು ವಾಟ್ಸ್ಆ್ಯಪ್ ಟ್ರೂಕಾಲರ್ ನೊಂದಿಗೆ ಒಪ್ಪಂದ

ನಕಲಿ‌ ಕರೆಗಳನ್ನು ತಡೆಯಲು ವಾಟ್ಸ್ಆ್ಯಪ್ ಟ್ರೂಕಾಲರ್ ನೊಂದಿಗೆ ಒಪ್ಪಂದ


ಹೊಸದಿಲ್ಲಿ: ಮೊಬೈಲ್‌ ಗಳಿಗೆ ಪ್ರತೀದಿನವೂ ಯಾರು ಯಾರದ್ದೋ ಕರೆಗಳು ಬಂದೂಬಂದೂ ಒಂದಷ್ಟು ಬೇಸರ ಹುಟ್ಟಿಸಬಹುದು. ಆದರೆ ಇಂತಹ ನಕಲಿ ಕರೆಗಳು ಕೇವಲ ಖಾಸಗಿ ಮೊಬೈಲ್ ಸಂಖ್ಯೆಗಳಿಗೆ ಮಾತ್ರವಲ್ಲ ವಾಟ್ಸ್‌ಆ್ಯಪ್‌ಗೂ ಬರಲು ಆರಂಭವಾಗಿದೆ. ದಿನನಿತ್ಯ ಈ ಬಗ್ಗೆ ಟ್ವೀಟ್‌ ಮಾಡಿ ದೂರು ದಾಖಲಿಸುವವರ ಸಂಖ್ಯೆಯೂ ಹೆಚ್ಚಿದೆ.

ಇದಕ್ಕೊಂದು ಪರಿಹಾರ ಒದಗಿಸಲು ವಾಟ್ಸ್‌ಆ್ಯಪ್‌ ಬಲವಾದ ಹೆಜ್ಜೆ ಇಟ್ಟಿದೆ. ಟ್ರೂಕಾಲರ್‌ ನೊಂದಿಗೆ ಒಪ್ಪಂದ ಮಾಡಿರುವ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಬರುವ ನಕಲಿ ಕರೆಗಳನ್ನು ಗುರುತಿಸಲು ಮುಂದಾಗಿದೆ. ಈ ಮೂಲಕ ಟ್ರೂಕಾಲರ್‌ ಮುಂದಿನ ದಿನಗಳಲ್ಲಿ ವಾಟ್ಸ್‌ಆ್ಯಪ್‌ನಲ್ಲೂ ಸೇವೆ ಆರಂಭಿಸಲಿದೆ.

ಸದ್ಯ ಈ ಫೀಚರ್ ವಾಟ್ಸ್‌ಆ್ಯಪ್‌ನಲ್ಲಿ ಪ್ರಾಯೋಗಿಕ ಹಂತದಲ್ಲಿದೆ. ಈಗ ಕೆಲವೇ ಕೆಲವರಿಗೆ ಈ ಫೀಚರ್ ಲಭ್ಯವಾಗುತ್ತಿದೆ. ಮೇ ಅಂತ್ಯಕ್ಕೆ ಇಡೀ ಜಗತ್ತಿನಾದ್ಯಂತ ಲಭ್ಯವಾಗುವ ನಿರೀಕ್ಷೆಯಿದೆ. ಇಡೀ ಜಗತ್ತಿನಲ್ಲಿ 200 ಕೋಟಿಗೂ ಅಧಿಕ ವಾಟ್ಸ್‌ಆ್ಯಪ್‌ ಬಳಕೆದಾರರಿದ್ದಾರೆ. ಭಾರತದಲ್ಲಿ ವ್ಯಕ್ತಿಯೊಬ್ಬ ತಿಂಗಳಿಗೆ ಸರಾಸರಿ 17 ನಕಲಿ ಕರೆಗಳನ್ನು ಪಡೆಯುತ್ತಾನೆ.

ತನ್ನ ಬಳಕೆದಾರರಿಗೆ ಬಂದಿರುವ ಈ ಸಮಸ್ಯೆಯಿಂದ ಎಚ್ಚೆತ್ತಿರುವ ವಾಟ್ಸ್‌ಆ್ಯಪ್‌, ನಕಲಿ ಕರೆಗಳನ್ನು ಕೂಡಲೇ ಬ್ಲಾಕ್‌ ಮಾಡಿ, ವರದಿ ಮಾಡಲು ತಿಳಿಸಿದೆ. ಸದ್ಯ ಕೀನ್ಯಾ, ಮಲೇಷ್ಯಾ, ವಿಯೆಟ್ನಾಮ್‌, ಇಥಿಯೊಪಿಯಾದಂತಹ ದೇಶಗಳ ಕೋಡ್‌ಗಳನ್ನು ಹೊಂದಿರುವ ಸಂಖ್ಯೆಗಳಿಂದ ಕರೆಗಳು ಬರುತ್ತಿವೆ. ಇಂತಹ ಕರೆಗಳನ್ನು ಯಾರು ಮಾಡುತ್ತಿದ್ದಾರೆ, ಅವರ ಹುನ್ನಾರವೇನೆಂದು ಮಾತ್ರ ಇನ್ನೂ ಗೊತ್ತಾಗಿಲ್ಲ.


Ads on article

Advertise in articles 1

advertising articles 2

Advertise under the article