-->
ಮಂಗಳೂರು: ಅಬ್ಬರದ ಪ್ರಚಾರದ ನಡುವೆಯೂ ಇನಾಯತ್ ಅಲಿ ಸೋಲಲು ಕಾರಣವೇನು?

ಮಂಗಳೂರು: ಅಬ್ಬರದ ಪ್ರಚಾರದ ನಡುವೆಯೂ ಇನಾಯತ್ ಅಲಿ ಸೋಲಲು ಕಾರಣವೇನು?


ಮಂಗಳೂರು: ದ.ಕ.ಜಿಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ಕೈ - ಕಮಲ ಹಾಗೂ ಜೆಡಿಎಸ್ ಮೂರು ಪಕ್ಷಗಳಿಗೆ ಪ್ರತಿಷ್ಠೆಯ ಕ್ಷೇತ್ರವಾಗಿತ್ತು. ಆದರೆ ಹೊಸ ಮುಖ ಇನಾಯತ್ ಅಲಿಯವರ ಅಬ್ಬರದ ಪ್ರಚಾರದ ನಡುವೆಯೂ ಕೈ ಪಕ್ಷ ಸೋಲನ್ನು ಅನುಭವಿಸಬೇಕಾಯಿತು. ಈ ಸೋಲಿಗೆ ಕಾರಣವೇನು ಎಂಬ ವಿಶ್ಲೇಷಣೆ ಇಲ್ಲಿದೆ.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಬಿಜೆಪಿಯ ಪ್ರಬಲ ಕೋಟೆ ಇಲ್ಲಿ ಈ ಕ್ಷೇತ್ರ 1994ರಲ್ಲಿ ಬಿಜೆಪಿ ಪಾಲಾಯಿತು. ಆ ಬಳಿಕ ಎರಡು ಬಾರಿ ಕಾಂಗ್ರೆಸ್ ಇಲ್ಲಿ ಗೆಲುವು ಸಾಧಿಸಿದ ಹೊರತು ಇಲ್ಲಿ ಬಿಜೆಪಿಯೇ ತನ್ನ ಪ್ರಾಬಲ್ಯ ಸಾಧಿಸಿತ್ತು. ಹಾಲಿ ಶಾಸಕ ಡಾ.ವೈ.ಭರತ್ ಶೆಟ್ಟಿ ಅಭಿವೃದ್ಧಿ ಹಾಗೂ ಹಿಂದುತ್ವ ಎರಡೂ ವಿಚಾರದಲ್ಲಿ ಕೆಲಸ ಮಾಡಿದ್ದಾರೆ‌. ಈ ಕಾರಣದಿಂದ ಭರತ್ ಶೆಟ್ಟಿಯವರು ಈ ಬಾರಿ ಅತ್ಯಧಿಕ ಮತ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ದರಿಂದ ಇನಾಯತ್ ಅಲಿಯವರು ಅಬ್ಬರದ ಪ್ರಚಾರ ಮಾಡಿದರೂ ಮತದಾರರು ಭರತ್ ಶೆಟ್ಟಿಯವರಿಗೆ ಮತ್ತೊಮ್ಮೆ ಅವಕಾಶ ನೀಡಿದ್ದಾರೆ.




Ads on article

Advertise in articles 1

advertising articles 2

Advertise under the article