ಖೇಲೋ ಇಂಡಿಯಾ: ಆಳ್ವಾಸ್‌ನ 37 ಕ್ರೀಡಾಳುಗಳ ಆಯ್ಕೆ
ಖೇಲೋ ಇಂಡಿಯಾ: ಆಳ್ವಾಸ್‌ನ 37 ಕ್ರೀಡಾಳುಗಳ ಆಯ್ಕೆ
ಉತ್ತರ ಪ್ರದೇಶದ ಲಖ್ನೌನಲ್ಲಿ ಆರಂಭಗೊಂಡಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಆಳ್ವಾಸ್‌ನ 37 ಕ್ರೀಡಾಳುಗಳು ಭಾಗವಹಿಸುತ್ತಿದ್ದಾರೆ.
ಮಲ್ಲಕಂಬ ಬಿಬಿಟಿ ಯೂನಿವರ್ಸಿಟಿ ಮೈದಾನದಲ್ಲಿ ಅಥ್ಲೆಟಿಕ್ಸ್ ಗುರುಗೋವಿಂದ ಸಿಂಗ್ ಸ್ಪೋರ್ಟ್ಸ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.
ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಈಗಾಗಲೇ ಶುರುವಾಗಿದೆ. ಮೇ 29, 30 ಮತ್ತು 31ರಂದು ಅಥ್ಲೆಟಿಕ್ಸ್ ನಡೆಯುತ್ತದೆ.
ಮಲ್ಲಕಂಬ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಾತ್ರ ಸ್ಪರ್ಧಿಸುತ್ತಿದ್ದು, ಇದರಲ್ಲಿ ಆಳ್ವಾಸ್ ತಂಡವೇ ಸ್ಪರ್ಧಿಸುತ್ತಿದೆ ಎಂಬುದು ವಿಶೇಷ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾ ದತ್ತು ಮತ್ತು ವಿಶೇಷ ತರಬೇತಿಯಿಂದ ಖೇಲೋ ಇಂಡಿಯಾದಲ್ಲಿ ಮಲ್ಲಕಂಬ ಸ್ಪರ್ಧೆಗೆ ಪ್ರತಿನಿಧಿಸಲು ಸಾಧ್ಯವಾಗಿದೆ.
ಅಥ್ಲೆಟಿಕ್ಸ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ 29 ಕ್ರೀಡಾಪಟುಗಳು ಸ್ಪರ್ಧಿಸುತ್ತಿದ್ಧಾರೆ. ಈ ಪೈಕಿ ಆಳ್ವಾಸ್‌ನಿಂದ 25 ಕ್ರೀಡಾಳುಗಳು ಮಂಗಳೂರು ವಿವಿ ಯನ್ನು ಪ್ರತಿನಿಧಿಸುತ್ತಿದ್ಧಾರೆ. 13 ಬಾಲಕರು ಮತ್ತು 12 ಬಾಲಕಿಯರು ಖೇಲೋ ಇಂಡಿಯಾದ ಭಾಗವಾಗಿದ್ದಾರೆ.
.