ಕಾಳಿಂಗ ಸರ್ಪಕ್ಕೆ ಚುಂಬಿಸಿದ ಯುವಕನ ಧೈರ್ಯ ಕಂಡು ದಂಗಾದ ನೆಟ್ಟಿಗರು
Thursday, May 18, 2023
ನವದೆಹಲಿ: ಹಾವನ್ನು ಕಂಡಾಕ್ಷಣ ಎಲ್ಲರೂ ಭಯ ಪಡುತ್ತಿರುತ್ತಾರೆ. ಎಂಥಹ ಧೈರ್ಯವಂತರ ಎದೆಯಲ್ಲೂ ಭಯ ಹುಟ್ಟೇ ಹುಟ್ಟುತ್ತದೆ. ಅದರಲ್ಲೂ ಕಾಳಿಂಗ ಸರ್ಪವನ್ನು ಕಂಡರಂತೂ ಪ್ರಾಣವೇ ಬಾಯಿಗೆ ಬಂದಂಥಾಗುತ್ತದೆ. ಆದರೆ ಇಲ್ಲೊಬ್ಬ ಯುವಕ 12 ಅಡಿ ಉದ್ದದ ಭಯಾನಕವಾದ ಕಾಳಿಂಗ ಸರ್ಪಕ್ಕೆ ಮುತ್ತುಕೊಟ್ಟಿದ್ದಾನೆ. ಇದರ ಭಯಾನಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೀಡಿಯೋ ನೋಡಿದ ಮಂದಿ ಒಂದು ಕ್ಷಣ ದಂಗಾಗಿದ್ದಾರೆ.
ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಕಾಳಿಂಗ ಸರ್ಪಕ್ಕೆ ಚುಂಬಿಸಿದವನ ಹೆಸರು ನಿಕ್ ದಿ ರಾಂಗ್ಲರ್. ಈತ ಈತ ಬರೋಬ್ಬರಿ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಚುಂಬಿಸಿದ್ದಾನೆ. ತಾನು ಪ್ರಾಣಿಗಳು ಹಾಗೂ ಸರಿಸೃಪಗಳನ್ನು ಹೆಚ್ಚು ಇಷ್ಟ ಪಡುತ್ತೇನೆ ಎಂದು ಹೇಳಿಕೊಂಡಿದ್ದಾನೆ. ವೀಡಿಯೋದಲ್ಲಿ ಈತ ಸರ್ಪಕ್ಕೆ ಚುಂಬಿಸಿ, ಕ್ಯಾಮರಾಗೆ ಫೋಸ್ ನೀಡುತ್ತಿರುವುದನ್ನು ಕಾಣಬಹುದು. “ನೀವು 12 ಅಡಿ ಕಿಂಗ್ ಕೋಬ್ರಾಗೆ ಚುಂಬಿಸುತ್ತೀರಾ? ಈತ ಕೇಳಿದ್ದಾನೆ.
ವೈರಲ್ ಆಗಿರುವ ಈ ವಿಡಿಯೋವನ್ನು ಈವರೆಗೆ 4 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅನೇಕರು ಕಮೆಂಟ್ ಮಾಡಿ ನಿಕ್ಸ್ ನ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಕೆಲವರು ವಿಷ ಸರ್ಪಗಳೊಂದಿಗೆ ಸಾಹಸ ಮಾಡುವಾಗ ಜಾಗರೂಕತೆ ಅಗತ್ಯ. ಸ್ವಲ್ಪ ಎಡವಿದರೂ ಜೀವಕ್ಕೆ ಕಟ್ಟಿಟ್ಟಬುತ್ತಿ ಎಂದು ಸೂಚನೆ ನೀಡಿದ್ದಾರೆ.