ಹಾಟ್ ಫೋಟೋ ಹರಿಯಬಿಟ್ಟು ಗೇಲಿ ಮಾಡಿದವರಿಗೆ ತಮ್ಮ ಹಾಟ್ ಫೋಟೋ ಅಪ್ಲೋಡ್ ಮಾಡಿ ತಿರುಗೇಟು ನೀಡಿದ ಖುಷ್ಬೂ ಪುತ್ರಿ
Tuesday, May 2, 2023
ಚೆನ್ನೈ: ಬಹುಭಾಷಾ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಪುತ್ರಿ ಆವಂತಿಕಾ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ಹಾಟ್ ಫೋಟೊಗಳು ಎಲ್ಲರ ಗಮನ ಸೆಳೆದಿದೆ. ಈ ಹಿಂದೆ ದಢೂತಿ ದೇಹದಿಂದ ಅಪಹಾಸ್ಯಕ್ಕೆ ಗುರಿಯಾಗಿದ್ದ ಆವಂತಿಕಾ ಇದೀಗ ಬೋಲ್ಡ್ ಫೋಟೋಗಳ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದಾರೆ.
ಆವಂತಿಕಾ ಈ ಮೊದಲು ಭಾರೀ ದಪ್ಪಗಿದ್ದರು. ಇದು ಅವರ ಇನ್ ಸ್ಟಾಗ್ರಾಂನಲ್ಲಿರುವ ಹಳೆಯ ಫೋಟೋಗಳನ್ನು ನೋಡಿದರೆ ತಿಳಿಯುತ್ತದೆ. ದಢೂತಿ ದೇಹ ಹೊಂದಿದ್ದ ಅವರನ್ನು ಬಹಳಷ್ಟು ಮಂದಿ ಅಪಹಾಸ್ಯ ಮಾಡಿದ್ದರು. ಇದೀಗ ಅವರು ತಮ್ಮ ದೇಹವನ್ನು ಕರಗಿಸಿದ್ದು, ಫಿಟ್ ಆಗಿದ್ದಾರೆ. ಇದೀಗ ಇನ್ ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವ್ಯಂಗ್ಯವಾಡಿದವರ ಬಾಯಿ ಮುಚ್ಚಿಸಿದ್ದಾರೆ.
ಖುಷ್ಬೂ ಸುಂದರ್ ಸಹ ಈ ಹಿಂದೆ ದಪ್ಪಗಿದ್ದರು. ಅದಕ್ಕಾಗಿ ಅವರು 20 ಕೆಜಿ ತೂಕ ಇಳಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಇದೀಗ ಅಮ್ಮನಂತೆ ಪುತ್ರಿ ಕೂಡ ಸ್ಲಿಮ್ ಆಗಿದ್ದಾರೆ. ಆವಂತಿಕಾ ಅವರು ಖುಷ್ಬೂ ಸುಂದರ್ ಮತ್ತು ನಿರ್ದೇಶಕ ಸುಂದರ್ ಸಿ.ಯವರ ಪುತ್ರಿ. ಖುಷ್ಬೂರೊಂದಿಗೆ ಆವಂತಿಕಾ ಕೂಡ ದಢೂತಿ ದೇಹದಿಂದ ಒಂದು ಕಾಲದಲ್ಲಿ ಟ್ರೋಲಿಗರಿಗೆ ದಾಳವಾಗಿದ್ದರು. ಇಗ ಅದೇ ಟೀಕಾಕಾರರು ಅಮ್ಮ-ಪುತ್ರಿ ದೇಹ ಪರಿವರ್ತನೆ ಕಂಡು ಹುಬ್ಬೇರಿಸಿದ್ದಾರೆ.