ಕುಸ್ತಿಪಟುಗಳ ಸ್ಮೈಲ್ ವೈರಲ್: ನಗುಮೊಗ ಅಂಟಿಸಿ ವಿಕೃತಿ ಮೆರೆದ ಕುಹಕಿಗಳ ವಿರುದ್ಧ ವಾಗ್ದಾಳಿ !
ಕುಸ್ತಿಪಟುಗಳ ಸ್ಮೈಲ್ ವೈರಲ್: ನಗುಮೊಗ ಅಂಟಿಸಿ ವಿಕೃತಿ ಮೆರೆದ ಕುಹಕಿಗಳ ವಿರುದ್ಧ ವಾಗ್ದಾಳಿ !
ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾದ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿ ಪಟುಗಳು ನಡೆಸುತ್ತಿರುವ ಹೋರಾಟ ಮತ್ತೊಂದು ತಿರುವು ಪಡೆದುಕೊಂಡಿದೆ.
ಪ್ರತಿಭಟನೆ ನಡೆಸುತ್ತಿದ್ದ ಅಂತಾರಾಷ್ಟ್ರೀಯ ಕುಸ್ತಿ ಪಟುಗಳನ್ನು ಬಂಧಿಸಿ ಎಫ್‌ಐಆರ್ ಕೂಡ ದಾಖಲಿಸಲಾಗಿದೆ.
ಇದೇ ವೇಳೆ, ವಿನೇಶ್ ಪೋಗಾಟ್ ಮತ್ತು ಸಂಗೀತಾ ಪೊಗಾಟ್ ಪೊಲೀಸ್ ವಾಹನದಲ್ಲಿ ನಗುತ್ತಿರುವ ಫೋಟೋಗಳು ಸಾಮಾಜಿಕ ತಾಣದಲ್ಲಿ ಭಾರೀ ವೈರಲ್ ಆಗಿವೆ. ಈ ಕುರಿತು ಕಿಡಿ ಕಾರಿರುವ ಸಾಕ್ಷಿ ಮಲ್ಲಿಕ್, ಹೀಗೆ ಮಾಡಲು ನಾಚಿಕೆ ಆಗಲ್ವಾ..? ದೇವರು ಇಂತಹ ಜನರನ್ನು ಹೇಗೆ ತಾನೆ ಸೃಷ್ಟಿಸಿದರು ಎಂದು ಆಕ್ರೋ ಭರಿತರಾಗಿ ಪ್ರಶ್ನಿಸಿದ್ದಾರೆ.
ವಿಚಲಿತ ಕುಸ್ತಿಪಟುಗಳ ಮುಖವನ್ನು ನಗುತ್ತಿರುವ ಮುಖವನ್ನಾಗಿ ಮಾಡಿ ಎಡಿಟ್ ಮಾಡಿ ಕೆಲ ಕುಹಕಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಅವರಿಗೆ ಹೃದಯವೇ ಇಲ್ಲ. ಇವರು ನಮ್ಮ ಕುಖ್ಯಾತಿಗೆ ಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.
ನಾವು ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದೆವು. ಆದರೆ, ಅವರು ಅದಕ್ಕೆ ಅವಕಾಶ ನೀಡಲಿಲ್ಲ. ಬ್ಯಾರಿಕೇಡ್ ಹಾಕಿ ಹಿಂದಕ್ಕೆ ತಳ್ಳಿದರು. ನಂತರ ಬಸ್‌ಗೆ ಎಳೆದೊಯ್ದರು. ನಾವು ಯಾವುದೇ ಹಿಂಸಾಚಾರ ಮಾಡಿಲ್ಲ, ಸಾರ್ವಜನಿಕ ಸೊತ್ತಿಗೆ ಹಾನಿ ಮಾಡಿಲ್ಲ ಎಂದು ಸಾಕ್ಷಿ ಮಲ್ಲಿಕ್ ಹೇಳಿದರು.
ಜಂತರ್ ಮಂತರ್ ಬಳಿ ಕಳೆದ ಭಾನುವಾರ ಒಲಿಂಪಿಕ್ ಪದಕ ವಿಜೇತರಾದ ಭಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ಸಹಿತ 700 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದರು.
ಇದೇ ವೇಳೆ, ತಿರುಚಿದ ಫೋಟೋ ವಿರುದ್ಧ ನಟಿ ಉರ್ಫಿ ಜಾವೇದ್ ಕೂಡ ಕಿಡಿ ಕಾರಿದ್ದಾರೆ. ಜನರು ತಮ್ಮ ಸುಳ್ಳುಗಳನ್ನು ಸಾಬೀತುಪಡಿಸಲು ಏಕೆ ಈ ರೀತಿಯ ಫೋಟೋ ಹಾಕುತ್ತಾರೋ ಎಂದು ವಾಗ್ದಾಳಿ ನಡೆಸಿದರು.