ತಾಯಿಯನ್ನು ನಿರಂತರ ಹಿಂಸಿಸಿ ಥಳಿಸುತ್ತಿದ್ದ ತಂದೆಯನ್ನೇ ಹತ್ಯೆ ಮಾಡಿದ ಪುತ್ರ
Monday, May 8, 2023
ಮಹಾರಾಷ್ಟ್ರ: ತಾಯಿಯನ್ನು ನಿರಂತರ ಹಿಂಸಿಸಿ ಥಳಿಸುತ್ತಿದ್ದರಿಂದ ಕುಪಿತಗೊಂಡ ಪುತ್ರನೋರ್ವನು ತಂದೆಯನ್ನೇ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಂಬರನಾಥ್ ಎಂಬಲ್ಲಿ ನಡೆದಿದೆ. ಇದೀಗ ಆರೋಪಿ ಪುತ್ರ ಪೊಲೀಸ್ ವಶದಲ್ಲಿದ್ದು, ಕೊಲೆ ಪ್ರಕರಣ ದಾಖಲಾಗಿದೆ.
ಪ್ರಕಾಶ್(19) ಬಂಧಿಯ ಆರೋಪಿ.
ಪ್ರಕಾಶ್ ತಂದೆ ರಾಜೇಶ್ ವರ್ಮಾ(52) ಆಗಾಗ ಪತ್ನಿಯನ್ನು ನಿಂದಿಸಿ ಹಲ್ಲೆ ನಡೆಸುತ್ತಿದ್ದ. ಅದೇ ರೀತಿ ರವಿವಾರ ಮಧ್ಯಾಹ್ನ ವೇಳೆ ಪತ್ನಿಯನ್ನು ಏಕಾಏಕಿ ಥಳಿಸಲು ಆರಂಭಿಸಿದ್ದಾನೆ. ಈ ವೇಳೆ ಮನೆಯಲ್ಲಿದ್ದ ಪುತ್ರ ಪ್ರಕಾಶ್ ತಾಯಿಗೆ ಹೊಡೆಯುವುದನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾನೆ. ಆದರೆ ಪುತ್ರನ ಮಾತನ್ನು ಕೇಳದ ರಾಜೇಶ್ ಪತ್ನಿಯನ್ನು ಮತ್ತೂ ಹಿಂಸಿಸಿದ್ದಾನೆ.
ತನ್ನ ತಾಯಿಗೆ ನಿರಂತರವಾಗಿ ಕಿರುಕುಳ ನೀಡುತ್ತಿರುವುದರಿಂದ ಬೇಸತ್ತ ಪ್ರಕಾಶ್, ತಂದೆ ರಾಜೇಶ್ ಹೊಟ್ಟೆಗೆ ಹಲವು ಬಾರಿ ಚಾಕು ಇರಿದಿದ್ದಾನೆ. ವಿಚಾರ ತಿಳಿದು ಸ್ಥಳೀಯರು ತಕ್ಷಣ ಗಂಭೀರವಾಗಿ ಗಾಯಗೊಂಡಿದ್ದ ರಾಜೇಶ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಉಲ್ಲಾಸನಗರ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.