-->
ಮಂಗಳೂರು: ಕಾಂಗ್ರೆಸ್ ಗೆ ತಾಕತ್ತಿದ್ದಲ್ಲಿ ಬಜರಂಗದಳವನ್ನು ನಿಷೇಧಿಸಲಿ - ನಳಿನ್ ಕುಮಾರ್ ಕಟೀಲು

ಮಂಗಳೂರು: ಕಾಂಗ್ರೆಸ್ ಗೆ ತಾಕತ್ತಿದ್ದಲ್ಲಿ ಬಜರಂಗದಳವನ್ನು ನಿಷೇಧಿಸಲಿ - ನಳಿನ್ ಕುಮಾರ್ ಕಟೀಲು

ಮಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತಾವು ಅಧಿಕಾರಕ್ಕೆ ಬರುವುದಿಲ್ಲವಬುದು ಕಾಂಗ್ರೆಸ್ ಪಕ್ಷಕ್ಕೆ ಗ್ಯಾರಂಟಿಯಿದೆ. ಅಧಿಕಾರಕ್ಕೆ ಬಂದರೆ ತಾಕತ್ತಿದ್ದರೆ ಬಜರಂಗಳ ನಿಷೇಧ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕಿಡಿಕಾರಿದರು.

ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಮಾಡುವ ಪ್ರಸ್ತಾಪದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಅವಸಾನದತ್ತ ಹೋಗುತ್ತಿದೆ. ಆದ್ದರಿಂದ ಬಜರಂಗದಳವನ್ನು ನಿಷೇಧಿಸುವುದಾಗಿ ತನಯ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ. ಸಿದ್ದರಾಮಯ್ಯ, ಡಿಕೆಶಿಯವರ ಮುತ್ತಾತ ನೆಹರೂ, ಅಜ್ಜಿ ಇಂದಿರಾ ಗಾಂಧಿಯವರು ಆರ್ ಎಸ್ ಎಸ್ ನಿಷೇಧ ಮಾಡಲು ಹೋಗಿದ್ದರಿಂದಲೇ ಆರ್ ಎಸ್ಎಸ್ ಹಾಗೂ ಹಿಂದೂ ಸಂಘಟನೆಗಳು ದೇಶಾದ್ಯಂತ ಬಲವಾಗಿ ಬೆಳೆಯಲು ಕಾರಣವಾಯಿತು ಎಂದರು.

ಜನರ ಭಾವನೆಗಳನ್ನು ಪ್ರಶ್ನಿದುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ. ರಾಷ್ಟ್ರ ಹಿತದ ಕೆಲಸ ಮಾಡುವ ಸಂಘಟನೆಗಳನ್ನು ನಿಷೇಧ ಮಾಡಲು ಹೋಗಿ ಎಸ್ ಡಿಪಿಐಯಂತಹ ಸಂಘಟನೆಗಳೊಂದಿಗೆ ಒಳ ಒಪ್ಪಂದ ಮಾಡಿ, ಚುನಾವಣೆಗಳು ಬರುವ ವೇಳೆ ಅವರೊಂದಿಗೆ ಸಂಧಾನ ಮಾಡುವ ನೀವು, ಎಸ್ ಡಿಪಿಐ, ಪಿಎಫ್ಐ ಜನರು ಜೈಲಿನೊಳಗಿದ್ದಾಗ ಅವರನ್ನು ಬಿಡುಗಡೆ ಮಾಡುವ ನೀವು ಹಿಂದೂ ಸಮಾಜಕ್ಕೆ ಅವಮಾನ, ಅಪಮಾನ ಮಾಡಿದ್ದೀರಿ. ಆದ್ದರಿಂದ ಹನುಮಭಕ್ತ ಜನ ಈ ಬಾರಿ ನಿಮಗೆ ದಾರಿ ತೋರಿಸಲಿದ್ದಾರೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.

Ads on article

Advertise in articles 1

advertising articles 2

Advertise under the article