'ಬೆಡ್ ಮೇಲೆ ನನಗೆ ರೋಶನ್ ಬೇಕು...!' ಸೋಶಿಯಲ್ ಮೀಡಿಯಾದಲ್ಲಿ ಮೆಗಾಸ್ಟಾರ್ ಪುತ್ರಿಯ ಹೇಳಿಕೆ
Thursday, May 11, 2023
ಹೈದರಾಬಾದ್: ನಟಿ ನಿಹಾರಿಕಾ ಕೊನಿದೆಲ ನಟಿಸಿರುವ ಸಿನಿಮಾದ ಟ್ರೈಲರ್ ಒಂದು ಬಿಡುಗಡೆಯಾಗಿದೆ. ಅದರಲ್ಲಿರುವ ಡೈಲಾಗೊಂದು ಇದೀಗ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ. 2016ರಲ್ಲಿ ಅವರು ಒಕ ಮನಸು ಸಿನಿಮಾ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ ಇವರು ಸದ್ಯ ಎಲಿಫೆಂಟ್ ಪಿಕ್ಚರ್ಸ್ ನಿರ್ಮಾಣದ ಡೆಡ್ ಪಿಕ್ಸೆಲ್ಸ್ ಹೆಸರಿನ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಅದರಲ್ಲಿರುವ ಒಂದು ಡೈಲಾಗ್ ಇದೀಗ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ.
'ನನಗೆ ಬೆಡ್ ಮೇಲೆ ರೋಶನ್ ಬೇಕು ತಲೆಯಲ್ಲಿ ಭಾರ್ಗವ್ ಇರಬೇಕು' ಎಂಬ ನಿಹಾರಿಕಾ ಡೈಲಾಗ್ ಈ ಸಿನಿಮಾ ಟ್ರೈಲರ್ ನಲ್ಲಿದೆ. ಈ ಡೈಲಾಗ್ ಮೂಲಕ ನಿಹಾರಿಕಾ ಪ್ರೇಕ್ಷಕರಿಗೆ ಏನು ಸಂದೇಶ ಕೊಡಲು ಹೊರಟಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಯಾವ ರೀತಿಯ ಸಂದೇಶವಿದೆ ಎಂದು ನಿಹಾರಿಕ ಗಮನ ಹರಿಸಿದರೆ ಒಳ್ಳೆಯದು ಎಂದು ಅವರ ತಂದೆ ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳು ಬುದ್ಧಿಮಾತು ಹೇಳುತ್ತಿದ್ದಾರೆ. ಸಿನಿಮಾ ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಇಂತಹ ಡೈಲಾಗ್‌ಗಳನ್ನು ನಿಹಾರಿಕಾ ಆದಷ್ಟು ನಿರ್ಲಕ್ಷಿಸಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.
ಇನ್ನು ನಿಹಾರಿಕಾ ಡೆಡ್ ಪಿಕ್ಸೆಲ್ಸ್ ಸರಣಿಯನ್ನು ಚೆನ್ನಾಗಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಟ್ರೋಲ್ ಆಗಿರುವ ವಿವಾದಿತ ಡೈಲಾಗ್ ಬಗ್ಗೆ ನಿಹಾರಿಕಾ ಏನು ಉತ್ತರ ನೀಡುತ್ತಾರೆ ಎಂದು ಕೇಳಲು ಅಭಿಮಾನಿಗಳು ಕಾದು ಕುಳಿತಿದ್ದಾರೆ. ನಿಹಾರಿಕಾ, ಸಾಯಿರೋನಕ್ ಮತ್ತು ಹರ್ಷಾ ಚೆಮುಡು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಡೆಡ್ ಪಿಕ್ಸೆಲ್ಸ್ ವೆಬ್ ಸರಣಿಯನ್ನು ಆದಿತ್ಯ ಮಂಡಲ್ ನಿರ್ದೇಶನ ಮಾಡಿದ್ದಾರೆ. ಈ ಸರಣಿಯು ಮೇ 19 ರಿಂದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ.
ಬ್ರಿಟಿಷ್ ಸರಣಿಯ ಡೆಡ್ ಪಿಕ್ಸೆಲ್‌ಗಳನ್ನು ಆಧರಿಸಿ ಈ ವೆಬ್ ಸರಣಿಯನ್ನು ನಿರ್ಮಾಣ ಮಾಡಲಾಗಿದೆ. ಡೆಡ್ ಪಿಕ್ಸೆಲ್ಸ್ ಸರಣಿಯು ಆರು ಭಾಗಗಳಲ್ಲಿ ತಯಾರಾಗುತ್ತಿದೆ ಎಂದು ತಿಳಿದಿದೆ. ನಿಹಾರಿಕಾ ಈ ಸರಣಿಯಲ್ಲಿ ಆಧುನಿಕ ಹುಡುಗಿ ಗಾಯತ್ರಿ ಪಾತ್ರದಲ್ಲಿ ನಟಿಸಿದ್ದಾರೆ.