ಜಾದೂ ಕ್ಷೇತ್ರದ ಸಾಧನೆ: ಕುದ್ರೋಳಿ ಗಣೇಶ್‌ರಿಗೆ ಪಟ್ಲ ಫೌಂಡೇಶನ್ ಯಕ್ಷ ಧ್ರುವ ಕಲಾ ಗೌರವ ಪ್ರಶಸ್ತಿ
ಜಾದೂ ಕ್ಷೇತ್ರದ ಸಾಧನೆ: ಕುದ್ರೋಳಿ ಗಣೇಶ್‌ರಿಗೆ ಪಟ್ಲ ಫೌಂಡೇಶನ್ ಯಕ್ಷ ಧ್ರುವ ಕಲಾ ಗೌರವ ಪ್ರಶಸ್ತಿ
ಪಟ್ಲ ಫೌಂಡೇಶನ್ ವತಿಯಿಂದ ಸಾಧಕರಿಗೆ ನೀಡಲಾಗುವ ಯಕ್ಷ ಧ್ರುವ ಕಲಾ ಗೌರವ ಪ್ರಶಸ್ತಿಯನ್ನು ಜಾದೂ ಕ್ಷೇತ್ರದ ಸಾಧನೆಗಾಗಿ ಕುದ್ರೋಳಿ ಗಣೇಶ್ ಇವರಿಗೆ ನೀಡಲಾಯಿತು.
ಮಂಗಳೂರಿನಲ್ಲಿ ನಡೆದ ಪಟ್ಲ ಸಂಭ್ರಮ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ,ಯಕ್ಷ ಧ್ರುವ ಪಟ್ಲ ಫೌಂಡೇಶನ್ ಗೌರವ ಅಧ್ಯಕ್ಷರಾದ ಶ್ರೀ ಸದಾಶಿವ ಶೆಟ್ಟಿ ಕನ್ಯಾನ, ಪಟ್ಲ ಫೌಂಡೇಶನ್ ಸಂಚಾಲಕರಾದ ಶ್ರೀ ಪಟ್ಲ ಸತೀಶ್ ಶೆಟ್ಟಿ ಮುಂತಾದ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.
ಜಾದೂ ಪ್ರದರ್ಶನದಲ್ಲಿ ತುಳು ಭಾಷೆ ಹಾಗೂ ಸಂಸ್ಕ್ರತಿಯನ್ನು ಬಿಂಬಿಸಿ ಜಾದೂ ಕಲೆಗೆ ರಂಗಕಲೆಯ ಸ್ಥಾನ ನೀಡುವಲ್ಲಿ ಮಹತ್ತರ ಪಾತ್ರ ವಹಿಸಿದ ಜೊತೆಗೆ ಜಾದೂ ಕಲೆಯ ಮೂಲಕ ತುಳುನಾಡಿನ ಕೀರ್ತಿಯನ್ನು ಜಗತ್ತಿನ ಎಲ್ಲೆಡೆ ಹಬ್ಬಿಸಿದ ಕುದ್ರೋಳಿ ಗಣೇಶ್ ಇವರ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.
ಸನ್ಮಾನಕ್ಕೆ ಉತ್ತರಿಸಿದ ಕುದ್ರೋಳಿ ಗಣೇಶ್ ಪ್ರಶಸ್ತಿ , ಸನ್ಮಾನಗಳು ಕಲಾವಿದರಿಗೆ ನೈತಿಕ ಬಲ ತುಂಬಿ ಮತ್ತಷ್ಟು ಸಾಧನೆಯನ್ನು ಮಾಡುವಂತೆ ಪ್ರೇರಣೆ ನೀಡುತ್ತದೆ. ಪಟ್ಲ ಫೌಂಡೇಶನ್ ಯಕ್ಷಗಾನ ಕಲೆಗೆ ಸಂಬಂಧಿಸಿದ್ದಾಗಿದ್ದರೂ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸಿದ್ದು ಅಭಿನಂದನಾರ್ಹವಾದದ್ದು ಎಂದು ಹೇಳಿದರು.