
Sanya Iyer: ಸಖತ್ ಬೋಲ್ಡ್ ಆಗಿ ಪೋಸ್ ಕೊಟ್ಟ ಸಾನ್ಯಾ ಐಯ್ಯರ್
ನಟಿ ಸಾನ್ಯಾ ಐಯ್ಯರ್ ಅವರು ಸಾಕಷ್ಟು ಸುದ್ದಿಯಲ್ಲಿ ಇದ್ದಾರೆ. ಸಾನ್ಯಾ ಬಾಲಿವುಡ್ನ ಖ್ಯಾತ ನಿರ್ಮಾಪಕ ಡಬು ರತ್ನಾನಿ ಬಳಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಒಂದಷ್ಟು photo ಹಂಚಿಕೊಂಡಿದ್ದರು. ಈಗ ಹೊಸ ಫೋಟೋ share ಮಾಡಿಕೊಂಡಿದ್ದಾರೆ.
ಸಾನ್ಯಾ ಐಯ್ಯರ್ ಅವರು ಈ ಫೋಟೋದಲ್ಲಿ ಸಖತ್ bold ಆಗಿ ಪೋಸ್ ನೀಡಿದ್ದಾರೆ. ಅವರ ಫೋಟೋಗೆ ಸಾವಿರಾರು ಮಂದಿ likes ಒತ್ತಿದ್ದಾರೆ.
ಅನೇಕರಿಗೆ ಈ ಫೋಟೋ ಇಷ್ಟವಾಗಿದೆ. ಸಾನ್ಯಾ ಅವರ ಬೋಲ್ಡ್ photoಗೆ ಒಂದಷ್ಟು ಪಾಸಿಟಿವ್ ಕಮೆಂಟ್ಗಳು ಬಂದಿವೆ
ಆದರೆ, ಕೆಲವರು ಫೋಟೋ ಬಗ್ಗೆ ಕ್ಯಾತೆಯನ್ನು ತೆಗೆದಿದ್ದಾರೆ. ಅವರು ಈ ಬಗ್ಗೆ ಟೀಕೆ ಮಾಡಿದ್ದಾರೆ. ಸಾನ್ಯಾ ಡ್ರೆಸ್ ಸರಿ ಇಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಕರ್ನಾಟಕದ ಸಂಸ್ಕೃತಿ ನೆನಪಿಸಿದ್ದಾರೆ.
ಇದು ಕರ್ನಾಟಕ. ಇಲ್ಲಿನ ಸಂಸ್ಕೃತಿಯು ನೆನಪಿರಲಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ‘ಆಫರ್ ಸಿಗಲಿ ಎಂದು ಈ ರೀತಿ ಮಾಡಬೇಡಿ’ ಎಂದು ವಿನಂತಿಸಿದ್ದಾರೆ. ಸಾನ್ಯಾ ಐಯ್ಯರ್ಗೆ ಕಿರುತೆರೆಯಲ್ಲಿ ಇದೀಗ ಬೇಡಿಕೆ ಇದೆ.