ಆಟವಾಡುತ್ತಿದ್ದ ನಾಲ್ಕರ ಬಾಲಕಿ ಹಾವು ಕಚ್ಚಿ ಸಾವು
Thursday, May 4, 2023
ತ್ರಿಶ್ಶೂರ್ : ಆಟವಾಡುತ್ತಿದ್ದ ನಾಲ್ಕರ ಬಾಲಕಿಯು ಹಾವು ಕಚ್ಚಿ ದಾರುಣವಾಗಿ ಮೃತಪಟ್ಟಿರುವ ಘಟನೆ ಕೇರಳ ರಾಜ್ಯದ ತ್ರಿಶ್ಶೂರ್ ಜಿಲ್ಲೆಯ ಅಂತಿಕ್ಕಾಡ್ನ ಮುತ್ತಿಚೂರ್ ನಲ್ಲಿ ನಡೆದಿದೆ.
ಮುತ್ತಿಚೂರಿನ ಪಲ್ಲಿಯಂಬಲಂ ಬಳಿಯ ಕಾಕೇರಿ ನಿವಾಸಿ ಶಮೀರ್ ಅವರ ಪುತ್ರಿ ಆಸಿಯಾ ರೈಹಾನ ಮೃತಪಟ್ಟ ದುರ್ದೈವಿ ಬಾಲಕಿ.
ಬುಧವಾರ ಸಂಜೆ ವೇಳೆಗೆ ಬಾಲಕಿ ಆಸಿಯಾ ರೈಹಾನ ಹಿತ್ತಲಿನಲ್ಲಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಳು. ಈ ವೇಳೆ ಆಕೆಗೆ ಹಾವು ಕಚ್ಚಿದೆ. ಇದನ್ನು ಗಮನಿಸಿದ ಆಕೆಯ ಪಾಲಕರು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.