ಮಂಗಳೂರು: ರಜೆಯಲ್ಲಿರುವ ದ.ಕ.ಜಿಲ್ಲಾ ಎಸ್ಪಿ ವಿಕ್ರಮ್ ಅಮಟೆ, ಪ್ರಭಾರ ಎಸ್ಪಿಯಾಗಿ ಸಿ.ಬಿ.ರಿಷ್ಯಂತ್ ನೇಮಕ
Wednesday, May 31, 2023
ಮಂಗಳೂರು: ದ.ಕ.ಜಿಲ್ಲಾ ಎಸ್ಪಿ ವಿಕ್ರಮ್ ಅಮಟೆಯವರು ಅನಾರೋಗ್ಯದ ಹಿನ್ನೆಲೆಯಲ್ಲಿ ರಜೆ ಪಡೆದಿದ್ದು, ಅವರ ಸ್ಥಾನಕ್ಕೆ ಐಪಿಎಸ್ ಅಧಿಕಾರಿ ಸಿ.ಬಿ.ರಿಷ್ಯಂತ್ ಅವರಿಗೆ ಪ್ರಭಾರ ಎಸ್ಪಿಯಾಗಿ ಜವಾಬ್ದಾರಿ ವಹಿಸಲಾಗಿದೆ.
ದಾವಣಗೆರೆಯ ಜಿಲ್ಲೆ ಎಸ್ಪಿಯಾಗಿದ್ದ ಸಿ.ಬಿ.ರಿಷ್ಯಂತ್ ರನ್ನು ಚುನಾವಣೆ ನಿಮಿತ್ತ ಬೆಂಗಳೂರಿನ ಡಿಜಿ ಕಚೇರಿಯಲ್ಲಿ ನೇಮಕ ಮಾಡಲಾಗಿತ್ತು. ಇದೀಗ ದ.ಕ.ಎಸ್ಪಿಯವರು ರಜೆಯಲ್ಲಿರುವುದರಿಂದ, ರಿಷ್ಯಂತ್ ಅವರಿಗೆ ಪ್ರಭಾರ ಹೊಣೆ ವಹಿಸಲಾಗಿದೆ.
ಸಿ.ಬಿ.ರಿಷ್ಯಂತ್ 2013ರ ಬ್ಯಾಚ್ ನ ಕರ್ನಾಟಕ ಕೇಡರ್ ಐ ಪಿಎಸ್ ಅಧಿಕಾರಿಯಾಗಿದ್ದಾರೆ. ಮೂಲತಃ ಬೆಂಗಳೂರು ನಿವಾಸಿಯಾಗಿರುವ ಇವರು ಪುತ್ತೂರಿನಲ್ಲಿ ಈ ಹಿಂದೆ ಎಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಬಾಗಲಕೋಟೆ, ದಾವಣಗೆರೆ, ಮೈಸೂರಿನಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇದೀಗ ಅವರನ್ನು ದ.ಕ. ಜಿಲ್ಲಾ ಪ್ರಭಾರ ಎಸ್ಪಿಯಾಗಿ ಸರಕಾರ ಆದೇಶ ಹೊರಡಿಸಿದೆ.