![Subrahmanya:- ನದಿಗೆ ಸ್ನಾನಕ್ಕಿಳಿದ ವಿದ್ಯಾರ್ಥಿನಿಯರು ನೀರಲ್ಲಿ ಮುಳುಗಿ ಸಾವು..! Subrahmanya:- ನದಿಗೆ ಸ್ನಾನಕ್ಕಿಳಿದ ವಿದ್ಯಾರ್ಥಿನಿಯರು ನೀರಲ್ಲಿ ಮುಳುಗಿ ಸಾವು..!](https://blogger.googleusercontent.com/img/b/R29vZ2xl/AVvXsEiPsGyKT-Zkzk1HQy6ZlQOcAFg-wk408NYRvYLtMFl7RBZk3hP8PcoGbt1ulGqGJiE4ZWjmvJK_zuCmulxFzFbOusN4GgrMXUS8pmNhcqam5_JAdj8UdWY1kux7AQdiUHQfpzSx8-fGsfI/s1600/1683564652689139-0.png)
Subrahmanya:- ನದಿಗೆ ಸ್ನಾನಕ್ಕಿಳಿದ ವಿದ್ಯಾರ್ಥಿನಿಯರು ನೀರಲ್ಲಿ ಮುಳುಗಿ ಸಾವು..!
Monday, May 8, 2023
ಸುಬ್ರಹ್ಮಣ್ಯ
ಸುಬ್ರಹ್ಮಣ್ಯ ಪೋಲಿಸ್ ಠಾಣಾ ವ್ಯಾಪ್ತಿಯ ಬಳ್ಪ ಸಮೀಪದ ಕೇನ್ಯ ಕಣ್ಕಲ್ ಎಂಬಲ್ಲಿ ಹೊಳೆಯಲ್ಲಿ
ಇಬ್ಬರು ಹೆಣ್ಣು ಮಕ್ಕಳು ಶಾಲಾ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿದ ಘಟನೆ ಬಗ್ಗೆ ವರದಿಯಾಗಿದೆ.
ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಸತೀಶ್ ಅಮ್ಮಣ್ಣಾಯ ಅವರ ಪುತ್ರಿಯರಾದ ಹಂಸಿತಾ ( 15 ) ಮತ್ತು ಅವಂತಿಕಾ ( 11 ) ಎಂಬ ಸಹೋದರಿಯರು ಮೃತಪಟ್ಟವರು.ಇವರು ಕಣ್ಕಲ್ಲು ಸತೀಶ್ ಅಮ್ಮಣ್ಣಾಯ ಎಂಬವರ ಮಕ್ಕಳು ಎಂದು ತಿಳಿದು ಬಂದಿದ್ದೂ, ಇವರು ಬೆಂಗಳೂರಿನಲ್ಲಿ ವಾಸವಿದ್ದೂ,ಊರಿನಲ್ಲಿ ನಡೆಯುವ ಕಾರ್ಯಕ್ರಮವೊಂದರ ನಿಮಿತ ಬಳ್ಪಕ್ಕೆ ಬಂದಿದ್ದರು ಎನ್ನಲಾಗಿದೆ.ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯ ಪೋಲಿಸರು ಆಗಮಿಸಿದ್ದೂ ಅಗ್ನಿಶಾಮಕ ದಳದಿಂದ ಇಬ್ಬರ ಮೃತದೇಹಗಳನ್ನು ಮೇಲಕ್ಕೆತ್ತಲಾಗಿದೆ, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.