Subrahmanya:- ಕಾಂತಾರಾ ಖ್ಯಾತಿಯ ಚಿತ್ರ ನಟ ರಿಷಭ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ
Thursday, May 11, 2023
ಸುಬ್ರಹ್ಮಣ್ಯ
ಕಾಂತಾರ ಸಿನಿಮಾ ಮೂಲಕ ದೇಶದಾಧ್ಯಂತ ಬಾರೀ ಖ್ಯಾತಿ ಪಡೆದಿರುವ ಕನ್ನಡ ಚಲನ ಚಿತ್ರ ನಟ ರಿಷಭ್ ಶೆಟ್ಟಿ ಅವರು ಕುಟುಂಬ ಸಮೇತರಾಗಿ ಕುಕ್ಕೆ ಕ್ಷೇತ್ರಕ್ಕೆ ಭೇಟಿ ನೀಡಿ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಭಾರತೀಯ ಚಿತ್ರರಂಗದಲ್ಲೇ ಪ್ರಖ್ಯಾತಿ ಪಡೆದ ಕಾಂತಾರಾ ಚಿತ್ರದ ಮೂಲಕ ರಿಷಭ್ ಶೆಟ್ಟಿ ಅವರು ಜನಪ್ರೀಯರಾದರು. ಕಾಂತಾರ ಚಿತ್ರವನ್ನು ಕಣ್ತುಂಬಿಕೊಂಡ ಪ್ರೇಕ್ಷಕರು ಅದರಲ್ಲಿ ಶಿವನಾಗಿ ಅಭಿನಯಿಸಿದ ರಿಷಬ್ ಶೆಟ್ಟಿ ಎಂಬ ಕಲಾವಿದನಿಗೆ ತಲೆ ಬಾಗುತ್ತಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಕ್ಕೆ ರಿಷಭ್ ಶೆಟ್ಟಿ ಅವರು ಆಗಮಿಸಿದ ಸಂದರ್ಭದಲ್ಲಿ ಅಭಿಮಾನಿಗಳು ಸೆಲ್ಪಿಗಾಗಿ ಮುಗಿಬಿದ್ದರು.