ಅಪರಾಧ ಮತ್ತು ವಿಧಿವಿಜ್ಞಾನ : ಕಾರಾಗೃಹದಲ್ಲಿ ಕಾನೂನು ಅರಿವು ಕಾರ್ಯಾಗಾರ
Sunday, May 28, 2023
ಅಪರಾಧ ಮತ್ತು ವಿಧಿವಿಜ್ಞಾನ: ಕಾರಾಗೃಹದಲ್ಲಿ ಕಾನೂನು ಅರಿವು ಕಾರ್ಯಾಗಾರ
ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರೋಶನಿ ನಿಲಯದ ವತಿಯಿಂದ ಜಿಲ್ಲಾ ಕಾರಾಗೃಹದಲ್ಲಿ ಕಾನೂನು ಅರಿವು ಕಾರ್ಯಾಗಾರ ನಡೆಯಿತು.
ರೋಶನಿ ನಿಲಯದ ಅಪರಾಧ ಮತ್ತು ವಿಧಿವಿಜ್ಞಾನ ಪದವಿ ವಿಭಾಗದ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿ ವಿಚಾರಣಾಧೀನ ಖೈದಿಗಳಿಗೆ ಕಾನೂನು ಅರಿವು ಕುರಿತು ಜಾಗೃತಿ ಮೂಡಿಸಿದರು.
ನೃತ್ಯ, ರೂಪಕ ಹಾಗೂ ಹಾಡುಗಳ ಮೂಲಕ ನಡೆದ ಕಾನೂನು ಅರಿವು ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ತಮ್ಮ ವಿಚಾರಗಳನ್ನು ಪರಿಣಾಮಕಾರಿಯಾಗಿ ನಿರೂಪಿಸಿದರು.
ಜಿಲ್ಲಾ ಕಾರಾಗೃಹದ ಮುಖ್ಯಾಧಿಕಾರಿ ಓಬಳೇಶಪ್ಪ, ಕಾನೂನು ಪ್ರಾಧಿಕಾರದ ವಕೀಲರಾದ ಸೌಮ್ಯ ಹಾಗೂ ರೋಶನಿ ನಿಲಯದ ಅಧ್ಯಾಪಕ ವೃಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.