1 ಸಾವಿರ ರೂ. ಇಟ್ಕೊಂಡು ಪರಾರಿಯಾಗಲು ಮನೆತೊರೆದ ಪ್ರೇಮಿಗಳಿಗೆ ದಾರಿ ಮಧ್ಯೆಯೇ ಕಾದಿತ್ತು ಬಿಗ್ ಶಾಕ್
Friday, June 30, 2023
ಬಿಹಾರ: ಕೇವಲ ಸಾವಿರ ರೂ. ಇಟ್ಕೊಂಡು ತಮ್ಮದೇ ಹೊಸಜೀವನ ಕಟ್ಕೊಳ್ ಬೇಕು ಎಂದು ನಿರ್ಧರಿಸಿ ಮನೆಬಿಟ್ಟು ಪರಾರಿಯಾಗಿದ್ದ ಪ್ರೇಮಿಗಳು ಗಸ್ತು ತಿರುಗುತ್ತಿದ್ದ ಪೊಲೀಸರ ಅತಿಥಿಗಳಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಪರಿಚಿತರಾಗಿ ಪ್ರೀತಿಸುತ್ತಿದ್ದ ಜೋಡಿಯು ತಮ್ಮ ಸಂಬಂಧವನ್ನು ಮನೆಯಲ್ಲಿ ಒಪ್ಪುವುದಿಲ್ಲ ಎಂದು ಗ್ರಹಿಸಿದೆ. ಅದಕ್ಕಾಗಿ
ಬಿಹಾರ ರಾಜ್ಯದ ದಿಘ್ರಾ ಜಿಲ್ಲೆಯ ಈ ಪ್ರೇಮಿಗಳು ತಾವೇ ಹೊಸ ಜೀವನವನ್ನು ಪ್ರಾರಂಭಿಸಬೇಕೆಂದು ನಿರ್ಧರಿಸಿ ಮನೆಯಿಂದ ಒಂದು ಸಾವಿರ ರೂ. ಕಳವುಗೈದ್ದು ಬೈಕ್ ನಲ್ಲಿ ಪರಾರಿಯಾಗಿದ್ದರು.
ಬೈಕ್‌ನಲ್ಲಿ ಓಡಿ ಹೋದ ಈ ಜೋಡಿಗೆ ಕಂಟಕವೊಂದು ಎದುರಾಗಿದೆ. ದಾರಿ ಮಧ್ಯೆ ಬೈಕ್ ಪೆಟ್ರೋಲ್ ಖಾಲಿಯಾದಾಗ ಮುಂದೆ ಏನು ಮಾಡುವುದು? ಎಲ್ಲಿ ಹೋಗುವುದು ಎಂದು ತಿಳಿಯದೆ, ಹತ್ತಿರದಲ್ಲಿದ್ದ ದೇವಸ್ಥಾನದಲ್ಲಿ ತಂಗಲು ನಿರ್ಧರಿಸಿದ್ದಾರೆ. ಆದರೆ ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸರು ಈ ಜೋಡಿಯನ್ನು ದೇವಸ್ಥಾನದಲ್ಲಿ ನೋಡಿ, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕೂಲಂಕುಷವಾಗಿ ವಿಚಾರಣೆ ನಡೆಸಿದ ಬಳಿಕ ಇಬ್ಬರ ಗುರುತು ಪತ್ತೆ ಹಚ್ಚಿದ ಪೊಲೀಸರು, ಅವರ ಕುಟುಂಬ ಸದಸ್ಯರಿಗೆ ಈ ವಿಚಾರವನ್ನು ತಿಳಿಸಿದ್ದಾರೆ.
ಮನೆಯವರು ಇಬ್ಬರನ್ನೂ ಕರೆದೊಯ್ದಿದ್ದು, ಇನ್ನು ಮುಂದೆ ಈ ರೀತಿಯ ತಪ್ಪು ಮಾಡದಂತೆ ಎಚ್ಚರಿಕೆ ಕೊಟ್ಟು ಪೊಲೀಸರು ಪ್ರೇಮಿಗಳನ್ನು ಕಳುಹಿಸಿಕೊಟ್ಟಿದ್ದಾರೆ.