ಆಟವಾಡುತ್ತಿದ್ದಾಗಲೇ ವಿದ್ಯುತ್ ಪ್ರವಹಿಸಿ 12ರ ಬಾಲಕ ದಾರುಣ ಸಾವು
Tuesday, June 13, 2023
ಗದಗ: ಆಟ ಆಡುತ್ತಿದ್ದ ಬಾಲಕನೋರ್ವನು ವಿದ್ಯುತ್ ಆಘಾತದಿಂದ ದಾರುಣವಾಗಿ ಮೃತಪಟ್ಟ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಹೆದ್ದಾರಿ ಪಕ್ಕದ ಜನತಾ ಪ್ಲಾಟ್ ಬಳಿ ನಡೆದಿದೆ.
ಪಂಕಜ್ ರಾಮು ಕಲಾಲ್ (12) ಮೃತಪಟ್ಟ ಬಾಲಕ.
367 ರಾಷ್ಟ್ರೀಯ ಹೆದ್ದಾರಿಯ ಗಜೇಂದ್ರಗಡ ಹಾಗೂ ಯಲಬುರ್ಗಾ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಆಟ ಆಡುತ್ತಿದ್ದ ಪಂಕಜ್ ಅಕಸ್ಮಾತ್ ಆಗಿ ಹೆದ್ದಾರಿ ಪಕ್ಕದ ವಿದ್ಯುತ್ ಕಂಬವನ್ನು ಸ್ಪರ್ಶಿಸಿದ್ದಾನೆ. ಪರಿಣಾಮ ವಿದ್ಯುತ್ ಪ್ರವಹಿಸಿ ಸಾವಿಗೀಡಾಗಿದ್ದಾನೆ.
ಬಾಲಕ ಕಂಬದಲ್ಲಿನ ವಿದ್ಯುತ್ ಆಘಾತಕ್ಕೊಳಗಾಗಿ ಸಾವಿಗೀಡಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.