ಮಂಗಳೂರು: ಸರಗಳವು ಮಾಡಲು ಬೈಕ್ ಕಳವು ಮಾಡುತ್ತಿದ್ದವರು ಪೊಲೀಸ್ ಬಲೆಗೆ - 14 ಲಕ್ಷ ರೂ. ಮೊತ್ತದ ಸೊತ್ತು ವಶಕ್ಕೆ
Monday, June 26, 2023
ಮಂಗಳೂರು: ಕರಾವಳಿಯ ಎರಡು ಜಿಲ್ಲೆಗಳಲ್ಲಿ ಚೈನ್ ಹಾಗೂ ಬೈಕ್ ಕಳವು ನಡೆಸುತ್ತಿದ್ದ ಇಬ್ಬರು ಆರೋಪೊಗಳನ್ನು ಪೊಲೀಸರು ಬಂಧಿಸಿ 14 ಲಕ್ಷ ರೂ. ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಟ್ವಾಳ ನಿವಾಸಿ ಹಮೀಬ್ ಹಸನ್ ಹಾಗೂ ಉಳ್ಳಾಲ ನಿವಾದಿ ಮಹಮ್ಮದ್ ಫೈಝಲ್ ಬಂಧಿತ ಆರೋಪಿಗಳು.
ಸುರತ್ಕಲ್ ಠಾಣಾ ವ್ಯಾಪ್ತಿಯ ನಿವಾಸಿ ವೃದ್ಧ ಮಹಿಳೆಯೋರ್ವರು ತಮ್ಮ ಮನೆಯಲ್ಲಿದ್ದ ವೇಳೆ ಆರೋಪಿಗಳು ಅವರ ಮನೆಯ ಕಂಪೌಂಡ್ ನೊಳಗೆ ಅಕ್ರಮ ಪ್ರವೇಶಿಸಿದ್ದಾರೆ. ಅವರು ತಾವು ಯಾರು ಎಂದು ಕೇಳಿದಾಗ ಆರೋಪಿಗಳು ಅವರ ಕತ್ತಿನಲ್ಲಿದ್ದ ಸರವನ್ನು ಎಳೆದೊಯ್ದು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿದ ಪೊಲೀಸರು ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿದ ವೇಳೆ ಆರೋಪಿಗಳ 8ಚೈನ್ ಹಾಗೂ ನಾಲ್ಕು ಬೈಕ್ ಕಳವು ಪ್ರಕರಣ ಬಯಲಾಗಿದೆ. ಆರೋಪಿಗಳು ಸರಗಳ್ಳತನ ಮಾಡಲೆಂದೆ ಬೈಕ್ ಗಳನ್ನು ಕಳವು ಮಾಡುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ 240 ಗ್ರಾಂ ಚಿನ್ನಾಭರಣ ಮತ್ತು 2ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆ ಕಾರ್ಯದಲ್ಲಿ ಆ್ರಮವಹಿಸಿದ ಪೊಲೀಸ್ ತಂಡಕ್ಕೆ ಪೊಲೀಸ್ ಕಮಿಷನರ್ 8,000 ನಗದು ಬಹುಮಾನ ನೀಡಿದರು.