ಸಂತ್ರಸ್ತೆಯರ 1,900 ಫೋಟೊಗಳು, ಅಶ್ಲೀಲ ವೀಡಿಯೋ ಈತನಲ್ಲಿತ್ತು: ನಟೋರಿಯಸ್ ಕ್ರಿಮಿನಲ್ ರೋಮಿಯೋ ಕಾಶಿಗೆ ಜೀವಾವಧಿ ಶಿಕ್ಷೆ
Friday, June 16, 2023
ನಾಗರಕೋಯಿಲ್: ತಮಿಳುನಾಡು ರಾಜ್ಯದ ನಟೋರಿಯಸ್ ಕ್ರಿಮಿನಲ್, ಕಾಮುಕ ರೋಮಿಯೋ ಕಾಶಿಗೆ ಮಹಿಳಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ವಿಧಿಸಿ ಆದೇಶಿಸಿದೆ.
ಕೇವಲ 29 ವರ್ಷದ ರೋಮಿಯೋ ಕಾಶಿ ಬಹಳಷ್ಟು ಮಹಿಳೆಯರೊಂದಿಗೆ ದೈಹಿಕ ಸಂಬಂಧ ಬೆಳೆಸಿ ಅವರಿಗೆ ಅರಿವಿಗೆ ಬಾರದಂತೆ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ. ಬಳಿಕ ಹಣಕ್ಕಾಗಿ ಬೆದರಿಕೆಯನ್ನೊಡ್ಡುತ್ತಿದ್ದ ಆರೋಪವಿದೆ.
ಇತ್ತೀಚೆಗೆ ವೈದ್ಯೆಯೊಬ್ಬರು ಕಾಶಿಯ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಕೈಗೊಂಡ ಕಾಶಿಯ ಅಸಲಿಯತ್ತು ಬಯಲಾಗಿದೆ. ಆ ಬಳಿಕ ಆರೋಪಿ ರೋಮಿಯೋ ಕಾಶಿ ವಿರುದ್ಧ ಪೊಲೀಸ್ ದೂರು ದಾಖಲಿಸಲು ಬಹಳಷ್ಟು ಮಹಿಳೆಯರು ಮುಂದೆ ಬಂದಿದ್ದಾರೆ. ಆ ಬಳಿಕದಿಂದ ಪ್ರಕರಣ ವೇಗ ಪಡೆದುಕೊಂಡಿದೆ. ಪೊಲೀಸ್ ತನಿಖೆ ನಡೆಸಿದ ವೇಳೆ ಪೊಲೀಸರೇ ಬೆಚ್ಚಿ ಬೀಳುವಷ್ಟು ಸೆಕ್ಸ್ ವೀಡಿಯೋಗಳು, ಸಂತ್ರಸ್ತೆಯ ಫೋಟೊಗಳು ದೊರಕಿದೆ. ಕಾಶಿಯ ಲ್ಯಾಪ್ ಟಾಪ್ ನಲ್ಲಿ 400 ಸೆಕ್ಸ್ ವಿಡಿಯೋಗಳು ಮತ್ತು ಸಂತ್ರಸ್ತೆಯ 1900 ಫೋಟೋಗಳು ಪತ್ತೆಯಾಗಿವೆ.
ಈ ಪ್ರಕರಣದಲ್ಲಿ ಕಾಶಿಯ ತಂದೆ ಥಂಕಪಾಂಡ್ಯನ್, ಸ್ನೇಹಿತರಾದ ಜಿನೋ ಮತ್ತು ದಿನೇಶ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈತ ತನ್ನ ಮೃದುವಾದ ಅಮಾಯಕ ನೋಟದಿಂದ ಯುವತಿಯರನ್ನು, ಮಹಿಳೆಯರನ್ನು ತನ್ನ ಖೆಡ್ಡಾಕ್ಕೆ ಬೀಳಿಸಿತ್ತಿದ್ದ. ಆತನನ್ನು ನಂಬಿದ ಅನೇಕರು ತಮ್ಮ ಮಾನದೊಂದಿಗೆ, ಹಣವನ್ನು ಕಳೆದುಕೊಂಡಿದ್ದಾರೆ.