ಮಂಗಳೂರು: ದಿನದ 24 ಗಂಟೆಯೂ ಅಂಚೆ ಬುಕ್ಕಿಂಗ್ ಸೇವೆ ಲಭ್ಯ
Thursday, June 15, 2023
ಮಂಗಳೂರು: ಇಲ್ಲಿನ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿರುವ ಅಂಚೆ ಇಲಾಖೆಯ ಆರ್.ಎಂ.ಎಸ್. ಕ್ಯೂ ಕಚೇರಿಯಲ್ಲಿ ದಿನದ 24 ಗಂಟೆಯೂ ತ್ವರಿತ ಅಂಚೆ ಸೇವೆ ಲಭ್ಯವಿದ್ದು, ನೋಂದಾಯಿತ ಅಂಚೆ ಸೇವೆಗೆ ಸಮಯದ ಪರಿಮಿತಿ ನಿಗದಿಪಡಿಸಲಾಗಿತ್ತು.
ಆದರೆ ಇದೀಗ ಅಂಚೆ ಗ್ರಾಹಕರ ಅನುಕೂಲಕ್ಕಾಗಿ ದಿನದ 24 ಗಂಟೆಗಳಲ್ಲಿಯೂ ತ್ವರಿತ ಅಂಚೆ ಸೇವೆಯ ಜೊತೆಗೆ ನೋಂದಾಯಿತ ಅಂಚೆ ಸೇವೆ ಹಾಗೂ ತ್ವರಿತ ಪಾರ್ಸೆಲ್ ಸೇವೆಯನ್ನು ಆರಂಭಿಸಲಾಗಿದೆ ಇದರೊಂದಿಗೆ ಅಂಚೆ ಚೀಟಿಗಳು ಕೂಡಾ ಲಭ್ಯವಿರುತ್ತದೆ.
ಈ ಎಲ್ಲಾ ಸೇವೆಗಳ ಶುಲ್ಕವನ್ನು ಗ್ರಾಹಕರು ಡಿಜಿಟಲ್ ಪಾವತಿ ಅಥವಾ ಕ್ಯೂಆರ್ ಕೋಡ್ ಮೂಲಕ ಪಾವತಿಸಿ ಈ ಸೇವೆಯ ಸದುಪಯೋಗ ಪಡೆಯಬಹುದು ಎಂದು ಆರ್.ಎಂ.ಎಸ್ ಕ್ಯೂ ವಿಭಾಗದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.