-->
ಪ್ರತೀ ದಿನ 4ಲಕ್ಷ ರೂ. ಸಂಪಾದನೆ ಎಂದು ವಿಕೀಪೀಡಿಯಾ ಕೂಡಾ ತಪ್ಪು ಹೇಳುತ್ತಿದೆ: ಕಷ್ಟದ ದಿನಗಳನ್ನು ನೆನಪಿಸಿದ ನೀಲಿ ಚಿತ್ರತಾರೆ ಶಕೀಲಾ

ಪ್ರತೀ ದಿನ 4ಲಕ್ಷ ರೂ. ಸಂಪಾದನೆ ಎಂದು ವಿಕೀಪೀಡಿಯಾ ಕೂಡಾ ತಪ್ಪು ಹೇಳುತ್ತಿದೆ: ಕಷ್ಟದ ದಿನಗಳನ್ನು ನೆನಪಿಸಿದ ನೀಲಿ ಚಿತ್ರತಾರೆ ಶಕೀಲಾ


ಹೈದರಾಬಾದ್: ಒಂದು ಕಾಲದಲ್ಲಿ ತಮಿಳು ಹಾಗೂ ಮಲಯಾಳಂ ಭಾಷೆಯ ಸಾಫ್ಟ್‌ಕೋರ್ ನೀಲಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಶಕೀಲಾ ಸ್ಟಾರ್ ನಟರಿಗೆ ಪೈಪೋಟಿ ನೀಡಿದ್ದರು. ಶಕೀಲಾ ಸಿನಿಮಾಗಳು ಬಿಡುಗಡೆಯಾಗುವ ವೇಳೆ ಸ್ಟಾರ್ ನಟರ ಸಿನಿಮಾಗಳೇ ಬದಿಗೆ ಸರಿಯುತ್ತಿದ್ದವು. ಆದರೆ ದಿನ ಕಳೆದಂತೆ ಶಕೀಲಾ ಅವರ ಖ್ಯಾತಿಯೂ ಕ್ಷೀಣಿಸುತ್ತಾ ಬಂದಿದೆ.

ಜಯಂ, ಅಳಗಿಯ ತಮಿಳ್ ಮಗನ್ ಸೇರಿದಂತೆ ಕೆಲವು ಸಿನಿಮಾಗಳಲ್ಲೂ ಶಕೀಲಾ ನಟಿಸಿದ್ದಾರೆ. ಅಲ್ಲದೆ, ಟಿವಿ ರಿಯಾಲಿಟಿ ಶೋಗಳಲ್ಲೂ ಅವರು ಭಾಗಿಯಾಗಿದ್ದಾರೆ. ಕನ್ನಡದ ಬಿಗ್‌ಬಾಸ್ ಶೋನಲ್ಲೂ ಕಾಣಿಸಿಕೊಂಡಿದ್ದರು. ಕಿರುತೆರೆಯಲ್ಲಿ ಕಾಣಿಸಿಕೊಂಡ ಬಳಿಕ ಅವರ ಪ್ರಸಿದ್ಧಿಯೂ ಹೆಚ್ಚಾಯಿತು. ಇದೀಗ ಸಂದರ್ಶನವೊಂದರಲ್ಲಿ ಶಕೀಲಾ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ. ಜೀವನದಲ್ಲಿ ತಾವು ಎದರಿಸಿದ ಕಠಿಣ ಕ್ಷಣಗಳನ್ನು ನೆನೆದಿದ್ದಾರೆ.

ತನ್ನ ಬಗ್ಗೆ ಹಲವಾರು ತಪ್ಪು ಮಾಹಿತಿಗಳು‌ ಹರಿದಾಡುತ್ತಿದೆ. ನಾನು ಐಷಾರಾಮಿ ಫ್ಲ್ಯಾಟ್ ಮತ್ತು ಬಿಎಂಡಬ್ಲ್ಯು ಕಾರನ್ನು ಹೊಂದಿದ್ದೇನೆ ಎಂದು ವಿಕಿಪೀಡಿಯಾ ಪುಟ ಹೇಳುತ್ತದೆ. ಆದರೆ, ಇದು ಯಾವುದೂ ಸತ್ಯವಲ್ಲ. ನಾನಿನ್ನೂ ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಿದ್ದೇನೆ. ಇದೇ ವೇಳೆ ತಮ್ಮ ಕಳೆದುಹೋದ ಜೀವನದ ದಿನಗಳನ್ನು ನೆನಪಿಸಿಕೊಂಡ ಅವರು, ವಯಸ್ಕರ ನೀಲಿ ಸಿನಿಮಾಗಳ ಮೂಲಕ ಗಳಿಸಿದ ಹಣವನ್ನು ತನ್ನ ಸಹೋದರಿಗೆ ನೀಡಿದ್ದೇನೆಂದು ಸ್ಮರಿಸಿದರು. ನಾನು ಪ್ರತಿ ದಿನಕ್ಕೆ 4 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದೆ. ಆಗ ಅಷ್ಟೊಂದು ಜನಪ್ರಿಯತೆ ಇತ್ತು. ಆದರೆ, ನನ್ನ ಸಹೋದರಿ ಎಲ್ಲ ಹಣವನ್ನು ತೆಗೆದುಕೊಂಡಳು ಮತ್ತು ನನಗಾಗಿ ಏನನ್ನೂ ಉಳಿಸಲಿಲ್ಲ ಎಂದರು.

ಪ್ರಸ್ತುತ ಜನಪ್ರಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಸಂದರ್ಶನಗಳನ್ನು ಹೋಸ್ಟ್ ಮಾಡುತ್ತಿರುವ ಶಕೀಲಾ, ಇತ್ತೀಚೆಗೆ ಮಾಲಿವುಡ್ ಮೆಗಾಸ್ಟಾರ್ ಮಮ್ಮುಟ್ಟಿ ಅವರು ತನ್ನ ಚಲನಚಿತ್ರ ಬಿಡುಗಡೆಯನ್ನು ತಡೆದಿದ್ದರ ಬಗ್ಗೆ ಮಾತನಾಡಿದ್ದರು. ನನ್ನ ಸಿನಿಮಾಗಳು ಹೆಚ್ಚಾಗಿ ಸಣ್ಣ ಬಜೆಟ್‌ನಲ್ಲಿ ತಯಾರಾಗಿದ್ದರೂ, ಸೂಪರ್‌ಸ್ಟಾರ್‌ಗಳ ಸಿನಿಮಾಗಳಿಗೂ ಕಠಿಣ ಫೈಟ್ ನೀಡುತ್ತಿತ್ತು. ಇದು ಮುಮ್ಮಟ್ಟಿಯವರ ಅಸಮಾಧಾನಕ್ಕೆ ಕಾರಣವಾಗಿತ್ತು. ಆ ಬಳಿಕ ನನ್ನ ಸಿನಿಮಾಗಳ ಬಿಡುಗಡೆ ಕಠಿಣವಾಯಿತು. ನಾನು ಮಲಯಾಳಂ ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಲು ಇದು ಒಂದು ಕಾರಣವಾಯಿತು ಎಂದು ಹೇಳಿದ್ದರು. ಇದು ಭಾರೀ ಚರ್ಚೆಯಾಗಿತ್ತು. 

Ads on article

Advertise in articles 1

advertising articles 2

Advertise under the article