-->
ಪತ್ನಿಗೆ 55 ಸಾವಿರ ಜೀವನಾಂಶ ನೀಡಲು 7ಚೀಲಗಳಲ್ಲಿ ನಾಣ್ಯಗಳನ್ನು ಹೊತ್ತು ತಂದ ಪತಿ

ಪತ್ನಿಗೆ 55 ಸಾವಿರ ಜೀವನಾಂಶ ನೀಡಲು 7ಚೀಲಗಳಲ್ಲಿ ನಾಣ್ಯಗಳನ್ನು ಹೊತ್ತು ತಂದ ಪತಿ


ರಾಜಸ್ಥಾನ: ಪತ್ನಿಗೆ ಜೀವನಾಂಶ ನೀಡಲೆಂದು 7 ಚೀಲಗಳ ಭರ್ತಿ ನಾಣ್ಯಗಳನ್ನು ನ್ಯಾಯಾಲಯಕ್ಕೆ ಪತಿಯೊಬ್ಬನು ಹೊತ್ತು ತಂದಿರುವ ಘಟನೆ ನಡೆದಿದೆ.

ರಾಜಸ್ಥಾನದ ಜೈಪುರ ಹರ್ಮಾಡಾ ಪ್ರದೇಶದ ನಿವಾಸಿ ಶರತ್ ಕುಮಾವತ್ ಎಂಬಾತ 12 ವರ್ಷಗಳ ಹಿಂದೆ ಸೀಮಾ ಎಂಬಾಕೆಯನ್ನು ವಿವಾಹವಾಗಿದ್ದ. ಕೆಲ ಕಾಲದ ಬಳಿಕ ಸೀಮಾ ತನ್ನ ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳದ ಪ್ರಕರಣವನ್ನು ದಾಖಲಿಸಿ, ಜೀವನಾಂಶ ನೀಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ತನಿಖೆ ಮುಂದುವರಿದು ಈ ಪ್ರಕರಣದಲ್ಲಿ ಪತ್ನಿಗೆ 55,000 ರೂ. ಜೀವನಾಂಶ ಪಾವತಿಸಲು ನ್ಯಾಯಾಧೀಶರು ತೀರ್ಪು ನೀಡಿದರು.

ನ್ಯಾಯಾಧೀಶರ ಆದೇಶವನ್ನು ಪಾಲಿಸಿದ ಶರತ್ ಕುಮಾವತ್ ತನ್ನ ಪತ್ನಿಗೆ ಜೀವನಾಂಶ ನೀಡಲು ಏಳು ಚೀಲ ಸಣ್ಣ ನಾಣ್ಯಗಳನ್ನು ತೆಗೆದುಕೊಂಡು ಬಂದಿದ್ದಾನೆ. ನ್ಯಾಯಾಧೀಶರೇ ಆ ಚೀಲಗಳನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ತೆರೆದು ನೋಡಿದಾಗ ಅದರಲ್ಲಿ ಒಂದೇ ಒಂದು ನೋಟು ಇರಲಿಲ್ಲ. ಚೀಲಗಳ ಭರ್ತಿ 1, 2, 5 ಮತ್ತು 10 ರೂಪಾಯಿ ನಾಣ್ಯಗಳಿತ್ತು. ಈ ಚೀಲಗಳು ಒಟ್ಟು 280 ಕೆ.ಜಿ. ತೂಕವನ್ನು ಹೊಂದಿತ್ತು.

ಪತ್ನಿಯ ಪರ ವಕೀಲರು ಇದನ್ನು ವಿರೋಧಿಸಿದ್ದಾರೆ. ಮಹಿಳೆಗೆ ಕಿರುಕುಳ ನೀಡಲು ಪೂರ್ವಯೋಜಿತ ರೀತಿಯಲ್ಲಿ ಇದನ್ನು ಮಾಡಲಾಗಿದೆ ಎಂದು ಹೇಳಿದ್ದರು. ಆದರೆ ಈ ನಾಣ್ಯಗಳು ಕಾನೂನುಬದ್ಧವಾಗಿದೆ. ಈ ಹಣವನ್ನು ಮಹಿಳೆ ತೆಗೆದುಕೊಳ್ಳಲು ಕೋರ್ಟ್ ಅನುಮತಿ ನೀಡುತ್ತದೆ ಎಂದು ನ್ಯಾಯಾಲಯವು ಹೇಳಿದೆ.

Ads on article

Advertise in articles 1

advertising articles 2

Advertise under the article